ಉಗ್ರ ಚಟುವಟಿಕೆಗಳಿಗೆ ಹಣ ಸ್ವೀಕರಿಸಿದ್ದಾಗಿ ಒಪ್ಪಿಕೊಂಡ ಸಲಾಹುದ್ದೀನ್ ಪುತ್ರ – News Mirchi

ಉಗ್ರ ಚಟುವಟಿಕೆಗಳಿಗೆ ಹಣ ಸ್ವೀಕರಿಸಿದ್ದಾಗಿ ಒಪ್ಪಿಕೊಂಡ ಸಲಾಹುದ್ದೀನ್ ಪುತ್ರ

ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಹಣ ಸ್ವೀಕರಿಸಿರುವುದಾಗಿ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸಲಾಹುದ್ದೀನ್ ಪುತ್ರ ಸೈಯದ್ ಶಾಹಿದ್ ಯೂಸುಫ್ ಒಪ್ಪಿಕೊಂಡಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ) ಬುಧವಾರ ಹೇಳಿದೆ.

ಕಾಶ್ಮೀರ ಕಣಿವೆಯಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ತನ್ನ ತಂದೆ ಸಲಾಹುದ್ದೀನ್ ನಿರ್ದೇಶನದಂತೆ ಹಿಜ್ಬುಲ್ ಮುಜಾಹಿದೀನ್ ನಾಯಕರಿಂದ ಹಣ ಪಡೆದಿದ್ದಾಗಿ ವಿಚಾರಣೆ ವೇಳೆ ಶಾಹಿದ್ ಒಪ್ಪಿಕೊಂಡಿದ್ದಾನೆ ಎಂದು ಎನ್.ಐ.ಎ ಅಧಿಕಾರಿಯೊಬ್ಬರು ಹೇಳಿದ್ದಾರೆ. ಯೂಸುಫ್ ನನ್ನು ಪಾಟಿಯಾಲ ಹೌಸ್ ಕೋರ್ಟ್ ನಲ್ಲಿ ಬುಧವಾರ ಹಾಜರುಪಡಿಸಲಾಯಿತು. ನಂತರ ಏಳು ದಿನಗಳು ಎನ್ಐಎ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ನೀಡಲಾಯಿತು. 2011 ರ ಟೆರರ್ ಫಂಡಿಂಗ್ ಪ್ರಕರಣದಲ್ಲಿ ರಾಜ್ಯ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಯೂಸುಫ್ ನನ್ನು ಹೆಸರಿಸಿದ್ದ ಎನ್.ಐ.ಎ,, ಮಂಗಳವಾರ ಆತನನ್ನು ಬಂಧಿಸಿತ್ತು.

ಹಿಬ್ಬುಲ್ ಮುಜಾಹಿದೀನ್ ಸಂಘಟನೆಯೊಂದಿಗೆ ಸಂಪರ್ಕವಿದ್ದು, ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಹಣ ಸಂಗ್ರಹಿಸಿ ವರ್ಗಾವಣೆ ಮಾಡುತ್ತಿರುವ ತನ್ನ ಸಹಚರರ ಬಗ್ಗೆಯೂ ಯೂಸುಫ್ ಮಾಹಿತಿ ಬಹಿರಂಗಪಡಿಸಿದ್ದಾನೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ ನಲ್ಲಿ ಕಾಶ್ಮೀರ ಮತ್ತು ದೆಹಲಿಯ ಸುಮಾರು 16 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಶೋಧ ಕಾರ್ಯ ನಡೆಸಿತ್ತು. ಜುಲೈನಲ್ಲಿ ಹುರಿಯತ್ ನಾಯಕ ಸೈಯದ್ ಅಲಿ ಶಾ ಗಿಲಾನಿ ಅಳಿಯ ಅಲ್ತಾಫ್ ಅಹಮದ್ ಶಾ ಸೇರಿದಂತೆ ಏಳು ಜನರನ್ನು ಇದೇ ಟೆರರ್ ಫಂಡಿಂಗ್ ಆರೋಪಗಳ ಮೇಲೆ ಬಂಧಿಸಿತ್ತು.

Get Latest updates on WhatsApp. Send ‘Add Me’ to 8550851559

Loading...