ಆ ಗಲಭೆಗಳಿಗೆ ಈಕೆ ಮಾಡಿದ ವೆಚ್ಚ 1 ಕೋಟಿ 25 ಲಕ್ಷ! – News Mirchi

ಆ ಗಲಭೆಗಳಿಗೆ ಈಕೆ ಮಾಡಿದ ವೆಚ್ಚ 1 ಕೋಟಿ 25 ಲಕ್ಷ!

ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ 20 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವುದು ತಿಳಿದದ್ದೇ. ಈ ಕುರಿತು ತೀರ್ಪು ಹೊರಬಿದ್ದ ನಂತರ ನಡೆದ ಗಲಭೆಗಳಿಗೆ ಆತನ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ ಅವರೇ ಮಾಸ್ಟರ್ ಮೈಂಡ್ ಎಂಬ ಮಾತು ಬಲವಾಗುತ್ತಿದೆ.

ಹಿಂಸಾಚಾರಕ್ಕಾಗಿ ಈಕೆ ಮಾಡಿದ್ದು 1 ಕೋಟಿ 25 ಲಕ್ಷ ರೂಪಾಯಿ

ಪಂಚಕುಲ ಸಿಬಿಐ ಕೋರ್ಟ್ ತೀರ್ಪಿನ ನಂತರ ನಡೆದ ಗಲಭೆ, ಹಿಂಸಾಚಾರಗಳಿಗೆ ಹನಿಪ್ರೀತ್ ಇನ್ಸಾನ್ 1 ಕೋಟಿ 25 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾಗಿ ಎಸ್.ಐ.ಟಿ ಅಧಿಕಾರಿಗಳು ಹೇಳುತ್ತಿದ್ದಾರೆ. ಗುರ್ಮೀತ್ ಆಪ್ತ ಸಹಾಯಕ ರಾಕೇಶ್ ಕುಮಾರ್ ನನ್ನು ವಿಚಾರಣೆ ನಡೆಸುವ ಸಮಯದಲ್ಲಿ ಹಲವು ಮಹತ್ವದ ವಿಷಯಗಳು ಬೆಳಕಿಗೆ ಬಂದಿವೆ ಎಂದು ಎಸ್.ಐ.ಟಿ ಅಧಿಕಾರಿ ಎಸಿಪಿ ಮುಖೇಶ್ ಹೇಳಿದ್ದಾರೆ.

[ಇದನ್ನೂ ಓದಿ: ಗುರ್ಮೀತ್ ಡೇರಾದಲ್ಲಿ ಅಸ್ಥಿಪಂಜರಗಳು, ಹೊರಬರುತ್ತಿವೆ ಶಾಕಿಂಗ್ ಸತ್ಯಗಳು’

ಗುರ್ಮೀತ್ ವಿರುದ್ಧ ತೀರ್ಪು ಹೊರಬಿದ್ದ ಸಂದರ್ಭದಲ್ಲಿ ಆತನೊಂದಿಗೆ ಆತನ ದತ್ತುಪುತ್ರಿ ಹನಿಪ್ರೀತ್, ಆಪ್ತ ಸಹಾಯಕ ರಾಕೇಶ್ ಕುಮಾರ್ ಕೂಡಾ ಇದ್ದರು. ತೀರ್ಪು ಹೊರಬಿದ್ದ ಕೂಡಲೇ ಗಲಭೆಗಳಿಗೆ ಅವರು ಯೋಜನೆ ರೂಪಿಸಿದ್ದರು. ಅದಕ್ಕಾಗಿ 1 ಕೋಟಿ 25 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಎಸ್.ಐ.ಟಿ ಅಧಿಕಾರಿಗಳು ಹೇಳಿದ್ದಾರೆ. ಇದೇ ವಿಷಯವನ್ನು ಪಂಚಕುಲ ಕಮೀಷನರ್ ಆಫ್ ಪೊಲೀಸ್ ಎ.ಎಸ್.ಚಾವ್ಲಾ ಕೂಡಾ ದೃಡಪಡಿಸಿದ್ದಾರೆ.

ಗುರ್ಮೀತ್ ಬಂಧನದ ನಂತರ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ವಿಶೇಷ ತನಿಖಾ ತಂಡದ ಅಧಿಕಾರಿಗಳು ರಾಕೇಶ್ ಕುಮಾರ್, ಹನಿಪ್ರೀತ್ ಇನ್ಸಾನ್ ಅವರ ವಿಚಾರಣೆ ನಡೆಸುತ್ತಿದ್ದಾರೆ. ಈ ಗಲಭೆಗಳಿಗೆ ಸಂಬಂಧಿಸಿದಂತೆ ಪ್ರಮುಖ ವ್ಯಕ್ತಿಗಳಾದ ಆದಿತ್ಯ ಇನ್ಸಾನ್, ಪವನ್ ಇನ್ಸಾನ್ ರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

[ಇದನ್ನೂ ಓದಿ: ಅಲ್ಲಾಹು ಅಕ್ಬರ್ ಎಂದು ಕಿರುಚುತ್ತಾ ಇಬ್ಬರ ಕತ್ತು ಕುಯ್ದ]

ಇನ್ನು ಹನಿಪ್ರೀತ್ , ಆಕೆಯ ಪತಿ ಇಕ್ಬಾಲ್ ಸಿಂಗ್, ಸುಖ್ ದೀಪ್ ಡೇರಾ ಕೋರ್ ಕಮಿಟಿ ಸದಸ್ಯರಾಗಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಡೇರಾ ಅನುಯಾಯಿಗಳಿಗೆ ಆಯುಧಗಳನ್ನು ಬಳಸುವುದು ಹೇಗೆ ಎಂಬ ವಿಷಯದಲ್ಲಿ ಸುಖ್ ದೀಪ್ ತರಬೇತಿ ನೀಡುತ್ತಿದ್ದನಂತೆ. ಡೇರಾ ಪ್ರಧಾನ ಕಛೇರಿಯಿಂದ ಸ್ವಾಧೀನ ಪಡಿಸಿಕೊಂಡ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಗಳನ್ನು ಐಟಿ ವಿಭಾಗ ಪರಿಶೀಲನೆ ನಡೆಸುತ್ತಿದೆ. ಇದರಿಂದ ಮತ್ತಷ್ಟು ಮಹತ್ವದ ವಿಷಯಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...