ಹನಿಪ್ರೀತ್ ತಲೆಮರೆಸಿಕೊಳ್ಳಲು ಬಳಸಿದ್ದು 18 ಸಿಮ್ ಕಾರ್ಡ್’ಗಳು – News Mirchi

ಹನಿಪ್ರೀತ್ ತಲೆಮರೆಸಿಕೊಳ್ಳಲು ಬಳಸಿದ್ದು 18 ಸಿಮ್ ಕಾರ್ಡ್’ಗಳು

ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ 38 ದಿನಗಳಿಂದ ಪೊಲೀಸರಿಗೆ ಸಿಗದಂತೆ ತಲೆಮರೆಸಿಕೊಂಡಿದ್ದ ವಿಷಯಕ್ಕೆ ಸಂಬಂಧಿಸಿದ ಒಂದೊಂದೇ ವಿಷಯಗಳು ಬೆಳಕಿಗೆ ಬರುತ್ತಿವೆ.

ಗುರ್ಮೀತ್ ಸಿಂಗ್ ವಿರುದ್ಧ ಪಂಚಕುಲ ಸಿಬಿಐ ಕೋರ್ಟ್ ತೀರ್ಪು ಪ್ರಕಟಿಸಿದ ಆಗಸ್ಟ್ 25 ರಂದು ಗಲಭೆಗಳ ನಡೆದಿದ್ದು. ಅದರ ಬೆನ್ನಲ್ಲೇ ಹನಿಪ್ರೀತ್ ಇನ್ಸಾನ್ ತಲೆಮರೆಸಿಕೊಂಡಿದ್ದರು. ಇತ್ತೀಚೆಗಷ್ಟೇ ನ್ಯಾಯಾಲಯದಲ್ಲಿ ಶರಣಾದ ಹನಿಪ್ರೀತ್ ಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ವಿಚಾರಣೆಯಲ್ಲಿ ಹಲವು ಕುತೂಹಲಕಾರಿ ವಿಷಯಗಳು ಬೆಳಕಿಗೆ ಬಂದಿವೆ.

[ಇದನ್ನೂ ಓದಿ: ಆ ಗಲಭೆಗಳಿಗೆ ಹನಿಪ್ರೀತ್ ಮಾಡಿದ ವೆಚ್ಚ 1 ಕೋಟಿ 25 ಲಕ್ಷ!]

ಆಗಸ್ಟ್ 25 ರ ನಂತರ ತಲೆಮರೆಸಿಕೊಂಡಿದ್ದ ಹನಿಪ್ರೀತ್, ಪೊಲೀಸರಿಂದ ತಪ್ಪಿಸಿಕೊಳ್ಳಲು ಎರಡು ರೀತಿಯ ಮೊಬೈಲ್ ಫೋನ್ ಗಳನ್ನು ಬಳಿಸಿದ್ದಾಗಿ ತಿಳಿದುಬಂದಿದೆ. ಅಷ್ಟೇ ಅಲ್ಲದೆ 2 ಅಂತರಾಷ್ಟ್ರೀಯ ಸಿಮ್ ಕಾರ್ಡ್ ಗಳು, 16 ಸ್ಥಳೀಯ ಸಿಮ್ ಕಾರ್ಡ್ ಗಳನ್ನು ಬದಲಿಸುತ್ತಾ ಬಳಸುತ್ತಿದ್ದಳು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.

ಈ ಸಂದರ್ಭದಲ್ಲಿಯೂ ಹನಿಪ್ರೀತ್ ವಾಟ್ಸಾಪ್ ಬಳಿಸಿದ್ದಳೆಂದು ತಿಳಿದುಬಂದಿದೆ, ಆದರೆ ಅದರಲ್ಲಿನ ಡಾಟಾ ಇನ್ನೂ ಲಭ್ಯವಾಗಿಲ್ಲ ಎಂದು ವಿಶೇಷ ಪೊಲೀಸ್ ತಂಡ ಹೇಳಿದೆ. ಹನಿಪ್ರೀತ್ ಕಾಲ್ ಡಾಟಾ ಸಂಗ್ರಹಿಸುವ ಕೆಲಸದಲ್ಲಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತನಿಖೆಗೆ ಹನಿಪ್ರೀತ್ ಸಹಕರಿಸುತ್ತಿಲ್ಲ ಎಂದು ಹೇಳಿರುವ ಅಧಿಕಾರಿಗಳು, ಆಕೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾಳೆ ಎಂದು ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...