ಕುಲಭೂಷಣ್ ಜಾಧವ್ ಪ್ರಕರಣ: ಅಂತಿಮ ತೀರ್ಪು ಕೂಡಾ ನಮ್ಮ ಪರ – News Mirchi

ಕುಲಭೂಷಣ್ ಜಾಧವ್ ಪ್ರಕರಣ: ಅಂತಿಮ ತೀರ್ಪು ಕೂಡಾ ನಮ್ಮ ಪರ

ಪ್ರಕರಣದಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯದ ತೀರ್ಮಾನವನ್ನು ಭಾರತ ಸ್ವಾಗತಿಸಿದೆ. ಅಂತಿಮ ತೀರ್ಪು ಕೂಡಾ ನಮಗೆ ಅನುಕೂಲಕರವಾಗಿ ಬರಲಿದೆ ಎಂಬ ಆಶಾಭಾವನೆಯನ್ನು ಅಟಾರ್ನಿ ಜನರಲ್ ವ್ಯಕ್ತಪಡಿಸಿದ್ದಾರೆ. ಜಾಧವ್ ಪುನಃ ಸ್ವದೇಶಕ್ಕೆ ಬರುವುದನ್ನು ನಾವೆಲ್ಲಾ ನೋಡುತ್ತೇವೆ ಎಂದು ಅವರು ಹೇಳಿದರು. ಈ ಪ್ರಕರಣದಲ್ಲಿ ಸೇನಾ ನ್ಯಾಯಾಲಯ ವಿಧಿಸಿರುವ ಗಲ್ಲು ಶಿಕ್ಷೆಗೆ ತಡೆ ನೀಡಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಭಾರತವು ಈ ಪ್ರಕರಣದಲ್ಲಿ ಆರಂಭದಿಂದಲೂ ಪ್ರಬಲ ವಾದ ಮಂಡಿಸಿತು, ಇದಕ್ಕೆ ಕಾರಣವಾದ ಪ್ರತಿಯೊಬ್ಬರನ್ನೂ, ಅದರಲ್ಲೂ ವಿದೇಶಾಂಗ ಸಚಿವಾಲಯವನ್ನು ಅಭಿನಂದಿಸುತ್ತಿದ್ದೇನೆ ಎಂದು ರೋಹಟಗಿ ಹೇಳಿದರು. ಅಂತರಾಷ್ಟ್ರೀಯ ನ್ಯಾಯಾಲಯದ ತೀರ್ಪಿನಿಂದ ಗೆ ಮುಖಭಂಗವಾಗಿದೆ ಎಂದು ಅವರು ಹೇಳಿದರು.

ಅಂತರಾಷ್ಟ್ರೀಯ ನ್ಯಾಯಾಲಯದ ತೀರ್ಪಿನಿಂದ ದೇಶಾದ್ಯಂತ ಸಂಭ್ರಮಾಚರಣೆ ನಡೆದಿದೆ. ಹಲವು ನಗರಗಳಲ್ಲಿ ಪಟಾಕಿ ಸಿಡಿಸಿ ಭಾರತೀಯರು ಸಂತಸ ವ್ಯಕ್ತಪಡಿಸಿದರು. ಅಂತಿಮ ತೀರ್ಪು ಹೊರಬೀಳುವವರೆಗೂ ಯಾವುದೇ ಕಾರಣಕ್ಕೂ ವಿಷಯದಲ್ಲಿ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಪಾಕ್ ಗೆ ಸೂಚಿಸಿದೆ. ಅವರನ್ನು ಭೇಟಿ ಮಾಡಲು ಪಾಕ್ ನಲ್ಲಿನ ಭಾರತೀಯ ರಾಯಭಾರಿ ಕಛೇರಿ ಅಧಿಕಾರಿಗಳಿಗೆ ಅವಕಾಶ ನೀಡಬೇಕು ಎಂದು ಹೇಳಿರುವುದು ಕೂಡಾ ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಗೆಲುವು ಎಂದು ಬಣ್ಣಿಸಲಾಗುತ್ತಿದೆ.

Comments (wait until it loads)
Loading...
class="clear">
error: Content is protected !!

News Mirchi is Stephen Fry proof thanks to caching by WP Super Cache