ಕೋಲಾರ: 5 ಸಹಾಯಕ ನಿರ್ದೇಶಕರ ಅಮಾನತು

ಕೋಲಾರ: ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಹಾಸ್ಟೆಲ್ ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ ನಡೆದಿರುವುದು ಸಾಬೀತಾಗಿದ್ದು, ಜಿಲ್ಲಾಧಿಕಾರಿ ತ್ರಿಲೋಕ್ ಚಂದ್ರ ರವರು ಐದು ಜನ ಸಹಾಯಕ ನಿರ್ದೇಶಕರನ್ನು ಅಮಾನತುಗೊಳಿಸಿದ್ದಾರೆ.

ಮುಳಬಾಗಿಲಿನ ಕಸ್ತೂರಿ ಬಾಯಿ, ಬಂಗಾರಪೇಟೆಯ ಶಿವಕುಮಾರ, ಶ್ರೀನಿವಾಸಪುರದ ಶಾಂತಮ್ಮ, ಮಾಲೂರಿನ ಅನಸೂಯಮ್ಮ ಮತ್ತು ರಾಮಸ್ವಾಮಿ ಅಮಾನತುಗೊಂಡ ಸಹಾಯಕ ನಿರ್ದೇಶಕರು. ಹಾಸ್ಟೆಲ್ ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ ನಡೆದಿರುವುದರ ಬಗ್ಗೆ ಜಿಲ್ಲಾ ಪಂಚಾಯ್ತಿ ಸಿಇಒ ಕಾವೇರಿಯವರು ವರದಿ ಸಲ್ಲಿಸಿದ್ದು, ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಅಮಾನತು ಆದೇಶ ಹೊರಡಿಸಿದ್ದಾರೆ.