Big Breaking News

ಹಾವಿನ ವಿಷಕ್ಕೆ ಇಷ್ಟೊಂದು ಬೆಲೆಯಾ?

ಕೋಲ್ಕತ: ವಿಶ್ವದಲ್ಲಿ ಎಲ್ಲೂ ಇಲ್ಲದಷ್ಟು ಪ್ರಮಾಣದಲ್ಲಿ ಭಾರತದಲ್ಲಿ ಸ್ಮಗ್ಲಿಂಗ್ ನಡೆಯುತ್ತಿದೆ. ಪಶ್ಚಿಮ ಬಂಗಾಳದ ಜಲ್ಪಾಯ್‌ಗುರಿಯಲ್ಲಿ ಮಾಡುತ್ತಿದ್ದವರನ್ನು ಬಂಧಿಸಿ ಅವರಿಂದ ಭಾರೀ ಪ್ರಮಾಣದ ಹಾವಿನ ವಿಷವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 245 ಕೋಟಿ ರೂಪಾಯಿ ಇರಬಹುದೆಂದು ಪೊಲೀಸರು ಪ್ರಕಟಿಸಿದ್ದಾರೆ.

Download Free

ರಾಷ್ಟ್ರೀಯ ಪತ್ರಿಕೆಗಳು ಇದರ ಮೌಲ್ಯ 175 ಕೋಟಿ ರೂಪಾಯಿ ಇರಬಹುದೆಂದು ಅಂದಾಜಿಸಿವೆ. ಪತ್ರಿಕೆಗಳು ಪ್ರಕಟಿಸಿದ ಮೌಲ್ಯದ ಪ್ರಕಾರ ನೋಡಿದರೂ ಪೊಲೀಸರು ವಶಪಡಿಸಿಕೊಂಡ ಸಾವಿರ ಗ್ರಾಂ ಗೆ ಲೆಕ್ಕ ಹಾಕಿದರೆ ಒಂದು ಗ್ರಾಂ ವಿಷದ ಬೆಲೆ ರೂ. 1,75,000 ಇರುತ್ತದೆ. ಪೊಲೀಸರೂ ಸಹ ಇಷ್ಟು ಬೆಲೆ ಇರಬಹುದೆಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿಯೇ ಇದನ್ನು ಬುಲ್ಲೆಟ್ ಪ್ರೂಫ್ ಗಾಜಿನ ಪೆಟ್ಟಿಗೆಗಳಲ್ಲಿ ಸ್ಮಗ್ಲಿಂಗ್ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಹಾವಿನ ವಿಷಕ್ಕೆ ಅಷ್ಟೊಂದು ಬೆಲೆಯಾ? ಇದನ್ನು ಖರೀದಿಸುವವರು ಯಾರು? ಇದರಿಂದೇನು ಪ್ರಯೋಜನ?

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಮಾನ್ಯ ನಾಗರಹಾವಿನ ವಿಷ ಗ್ರಾಂ ಗೆ ಹತ್ತು ಸಾವಿರ ಮಾತ್ರ, ಹೆಚ್ಚು ವಿಷ ನೀಡುವ ಕಿಂಗ್ ಕೋಬ್ರಾದಿಂದ ತೆಗೆಯುವ ವಿಷಕ್ಕೆ ಒಂದು ಗ್ರಾಂ ಗೆ ಒಂಬತ್ತು ಸಾವಿರ ಮಾತ್ರ. ತಾವು ವಶಪಡಿಸಿಕೊಂಡ ವೈದ್ಯಕೀಯ ಅಗತ್ಯಗಳಿಗಾಗಿ ತಯಾರಿಸಿದ್ದಾಗಿ ಫ್ರೆಂಚ್ ಕಂಪನಿಯ ಗುರುತಿದೆ ಎಂದು ಪೊಲೀಸರು ಹೇಳಿದ್ದಾರೆ. ಅವರು ಹೇಳುತ್ತಿರುವಂತೆ ವಿಶ್ವಾದ್ಯಂತ ಔಷಧಿಗಳಲ್ಲಿ ಈ ವಿಷವನ್ನು ಬಳಸುತ್ತಾರಂತೆ.

ಹಾವಿನ ಕಡಿತಕ್ಕೆ ನೀಡುವ ಔಷಧಿಗಳಲ್ಲಿ ಇದನ್ನು ಹೆಚ್ಚು ಉಪಯೋಗಿಸುತ್ತಾರೆ. ಹಾವಿನ ಕಡಿತಕ್ಕೆ ನೀಡುವ ಯಾಂಟಿ ವೀನಮ್ ಇಂಜೆಕ್ಷನ್ ಸೀಸೆ ಬೆಲೆ ಭಾರತದಲ್ಲಿ ಒಂದು ಸಾವಿರಕ್ಕೇ ಲಭಿಸುತ್ತದೆ. ಅದರಲ್ಲಿ ವಿಷದ ಪ್ರಮಾಣ ಕಡಿಮೆ ಇರುತ್ತದೆ. ಭಾರತೀಯ ಔಷಧ ಕಂಪನಿಗಳು ಹೇಳುತ್ತಿರುವಂತೆ 1,75,000 ರೂ ನೀಡಿ ಒಂದು ಗ್ರಾಂ ವಿಷ ಕೊಂಡರೆ ಯಾಂಟಿ ವೀನಮ್ ಬಾಟಲ್ ಅನ್ನು ಒಂದು ಸಾವಿರ ರೂಪಾಯಿಗೆ ಹೇಗೆ ಸರಬರಾಜು ಮಾಡಲು ಸಾಧ್ಯ? ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚೀನಾ ಒಂದು ಗ್ರಾಂ ವಿಷವನ್ನು 4,500 ಗಳಿಗೆ ಮಾರುತ್ತಿದೆ. ಅದೂ ಅಲ್ಲದೆ ಸದ್ಯ ನಮಗೆ ಸಾವಿರ ಗ್ರಾಂ ವಿಷದ ಅವಶ್ಯಕತೆಯಿಲ್ಲ. ಬುಲ್ಲೆಟ್ ಪ್ರೂಫ್ ಗಾಜಿನ ಪೆಟ್ಟಿಗೆಯಲ್ಲಿ ವಿಷವನ್ನು ಸರಬರಾಜು ಮಾಡುವ ಅವಶ್ಯಕತೆಯಂತೂ ಇಲ್ಲವೇ ಇಲ್ಲ. ಅಷ್ಟೇ ಅಲ್ಲದೆ ಎಲ್ಲಾ ರೀತಿಯ ಹಾವಿನ ಔಷಧಿ ಬೆರೆಸಿದ್ದರೆ ಅವು ಔಷಧಿ ತಯಾರಿಕಾ ಕಂಪನಿಗಳಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಏಕೆಂದರೆ ಒಂದೊಂದು ಜಾತಿಯ ಹಾವಿನ ವಿಷವೂ ಅವರಿಗೆ ಪ್ರತ್ಯೇಕವಾಗಿ ಬೇಕಾಗುತ್ತದೆ.

ಪಾರ್ಟಿಗಳಲ್ಲಿ ಮತ್ತೇರಲು ಯುವಜನತೆ ಈ ವಿಷವನ್ನು ದುರ್ಬಳಕೆ ಮಾಡುತ್ತಿದ್ದಾರೆ, ಹಾಗಾಗಿಯೇ ಇದಕ್ಕೆ ಇಷ್ಟೊಂದು ಬೆಲೆ ಎಂದು ಪೊಲೀಸರು ಹೇಳುತ್ತಿದ್ದಾರೆ.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache