ನಟ ದೊಡ್ಡಣ್ಣನ ಅಳಿಯನ ಬಾತ್ ರೂಮಲ್ಲಿ ಸಿಕ್ಕ ಹಣವೆಷ್ಟು? |News Mirchi

ನಟ ದೊಡ್ಡಣ್ಣನ ಅಳಿಯನ ಬಾತ್ ರೂಮಲ್ಲಿ ಸಿಕ್ಕ ಹಣವೆಷ್ಟು?

ಆದಾಯ ತೆರಿಗೆ ಅಧಿಕಾರಿಗಳ ನಿರಂತರ ದಾಳಿಗಳಿಂದ ಕಪ್ಪು ಕುಬೇರರ ಪಾಪದ ಕೊಡಗಳು ಒಂದೊಂದಾಗಿ ಒಡೆಯುತ್ತಿವೆ. ಬೆಡ್ ರೂಮು, ಬಾತ್ ರೂಮು, ಎಲ್ಲೇ ಕಪ್ಪು ಹಣ ಬಚ್ಚಿಟ್ಟರೂ ಹೊರತೆಗೆಯುತ್ತಿದ್ದಾರೆ ಐಟಿ ಅಧಿಕಾರಿಗಳು.

ಇತ್ತೀಚೆಗಷ್ಟೇ ಭಾರೀ ಪ್ರಮಾಣದ ಕಪ್ಪು ಹಣವನ್ನು ಸ್ವಾಧೀನಪಡಿಸಿಕೊಂಡ ಕರ್ನಾಟಕದ ಐಟಿ ಅಧಿಕಾರಿಗಳು, ಇದೀಗ ಚಿತ್ರದುರ್ಗದ ಮನೆಯೊಂದರ ಬಾತ್ ರೂಂ ಗೋಡೆಯಲ್ಲಿ ಅಡಗಿಸಿಟ್ಟಿದ್ದ ಹಣವನ್ನು ಹೊರತೆಗೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ಮನೆಯ ಬಾತ್ರೂಂ ಗೋಡೆಯ ಟೈಲ್ಸ್ ನಂತೆಯೇ ಕಾಣುವ ರಹಸ್ಯ ಲಾಕರ್ ನಲ್ಲಿ ಬಚ್ಚಿಟ್ಟಿದ್ದ ರೂ. 6.6 ಕೋಟಿ ನಗದನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

  • No items.

ಶುಕ್ರವಾರ ರಾತ್ರಿ ಬೆಂಗಳೂರು, ಮಂಗಳೂರು, ಹುಬ್ಬಳ್ಳು, ಚಿತ್ರದುರ್ಗಗಳಲ್ಲಿ ಏಕಕಾಲದಲ್ಲಿ 15 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಟ ದೊಡ್ಡಣ್ಣ ಅವರ ಅಳಿಯ ವೀರೇಂದ್ರ ಅಲಿಯಾಸ್ ಪಪ್ಪಿ ಮನೆಯಲ್ಲಿ ರೂ. 5.70 ಕೋಟಿ ಮೌಲ್ಯದ ರೂ. 2000 ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಹಣವನ್ನು ಬಾತ್ ರೂಮ್ ಗೋಡೆಯಲ್ಲಿ ರಹಸ್ಯವಾಗಿ ನಿರ್ಮಿಸಿದ್ದ ಸಣ್ಣ ಕೊಠಡಿಯಲ್ಲಿ ಸ್ಟೀಲ್ ಪೆಟ್ಟಿಗೆಗಳಲ್ಲಿ ಅಡಗಿಸಿದ್ದರು. ನಗದು ಜೊತೆಗೆ 28 ಕೆಜಿ ಚಿನ್ನದ ಬಿಸ್ಕತ್, ನಾಲ್ಕು ಕೆಜಿ ಚಿನ್ನ, ಬೆಳ್ಳಿ ಆಭರಣಗಳು ತನಿಖೆಯಲ್ಲಿ ಪತ್ತೆಯಾಗಿವೆ. ರೂ. 90 ಲಕ್ಷ ಮೌಲ್ಯದ ರೂ.100, ರೂ.20 ನೋಟುಗಳೂ ಪತ್ತೆಯಾಗಿವೆ.

ವೀರೇಂದ್ರ ರವರಿಗೆ ರಾಜ್ಯದ ಹಲವೆಡೆ ರಿಕ್ರಿಯೇಷನ್ ಕ್ಲಬ್ ಗಳಿವೆ. ಹಾಗಾಗಿ ಎಲ್ಲೆಡೆ ಶೋಧ ನಡೆಯುತ್ತಿದೆ. ವೀರೇಂದ್ರ ರವರ ಸ್ನೇಹಿತರ ಹಾಗೂ ಹವಾಲಾ ವ್ಯಾಪಾರಿ ಸಮಂದರ್ ಸಿಂಗ್ ಮನೆ ಜೊತೆ, ಸ್ಥಳೀಯ ಸಂಬಂಧಿಕರು, ಸ್ನೇಹಿತರ ಮನೆಗಳ ಮೇಲೂ ದಾಳಿ ನಡೆಸಿದ್ದಾರೆ.

Loading...
loading...
error: Content is protected !!