ಹುಟ್ಟಿನಿಂದಲೇ ತಾನೊಬ್ಬ ಕಾಂಗ್ರೆಸ್ ವಾದಿ, ಮರಳಿ ಗೂಡಿಗೆ ಸೇರಿದ್ದೇನೆ – News Mirchi

ಹುಟ್ಟಿನಿಂದಲೇ ತಾನೊಬ್ಬ ಕಾಂಗ್ರೆಸ್ ವಾದಿ, ಮರಳಿ ಗೂಡಿಗೆ ಸೇರಿದ್ದೇನೆ

ಹುಟ್ಟಿನಿಂದಲೇ ತಾನು ಕಾಂಗ್ರೆಸ್‌ ವಾದಿಯಾಗಿದ್ದು, ಇದೀಗ ಮರಳಿ ಸ್ವಂತ ಮನೆಗೆ ಬಂದಂತಾಗಿದೆ ಎಂದು ಮಾಜಿ ಕ್ರಿಕೆಟರ್ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ. ಬಿಜೆಪಿಗೆ ರಾಜೀನಾಮೆ ನೀಡಿ ಭಾನುವಾರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ನಂತರ ಮಾತನಾಡಿದ ಸಿಧು, ತಮ್ಮ ತಂದೆ ಕಾಂಗ್ರೆಸ್ ಪಕ್ಷದಲ್ಲಿ 40 ವರ್ಷ ಸೇವೆ ಸಲ್ಲಿಸಿದ್ದಾರೆಂದು ಹೇಳಿದರು.

ಕಾಂಗ್ರೆಸ್ ಪಕ್ಷ ತಮ್ಮನ್ನು ಯಾವ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೇಳಿದರೂ ಆ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ ಎಂದರು. ಮಾದಕ ಪದಾರ್ಥಗಳ ವಿರುದ್ಧದ ಹೋರಾಟವೇ ತಮ್ಮ ಚುನಾವಣಾ ಅಜೆಂಡಾ ಎಂದು ಸ್ಪಷ್ಟಪಡಿಸಿದರು. ಪಂಜಾಬ್ ನಲ್ಲಿ ಡ್ರಗ್ಸ್ ಮಹಾಮಾರಿಯಿಂದ ಯುವಜನರ ಜೀವನ ಹಾಳಾಗುತ್ತಿದೆ ಎಂದು ಅವರು ಬೇಸರ ವ್ಯಕ್ಯಪಡಿಸಿದರು.

ಸಿಖ್ ಸಮುದಾಯದ ಹತ್ಯಾಕಾಂಡ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದನ್ನು ಘರ್ ವಾಪಸಿ ಎಂದು ಬಣ್ಣಿಸಿದ ಸಿಧುಗೆ ಅಭಿನಂದನೆಗಳು ಎಂದು ಹರ್ಸಿಮ್ರತ್ ಕೌರ್ ಬಾದಲ್ ವ್ಯಂಗ್ಯವಾಡಿದ್ದಾರೆ.

Loading...

Leave a Reply

Your email address will not be published.