ಕರ್ನಾಟಕದಿಂದ ಬಂದ ನಾನೀಗ ಪಕ್ಕಾ ತಮಿಳಿಗ – News Mirchi

ಕರ್ನಾಟಕದಿಂದ ಬಂದ ನಾನೀಗ ಪಕ್ಕಾ ತಮಿಳಿಗ

ಚೆನ್ನೈ: ರಜನೀಕಾಂತ್ ರಾಜಕೀಯ ಪ್ರವೇಶ ಕುರಿತಂತೆ ಹಲವು ದಿನಗಳಿಂದ ಕುರಿತು ಹಲವು ಊಹಾಪೋಹಗಳು ಹರಿದಾಡುತ್ತಿವೆ. ಇದರ ನಡುವೆ ಶುಕ್ರವಾರ ಅಭಿಮಾನಿಗಳೊಂದಿಗೆ ಭೇಟಿ ಮಾಡಿದ ಸಂದರ್ಭದಲ್ಲಿ ಮಾತನಾಡಿದ ರಜನೀಕಾಂತ್, “ನಾನು ಕರ್ನಾಟಕದಿಂದ ಬಂದವನಾದರೂ, ನಿಮ್ಮ ಅಭಿಮಾನದಿಂದ ನನ್ನನ್ನು ಸಂಪೂರ್ಣ ತಮಿಳಿಗನನ್ನಾಗಿ ಮಾಡಿದ್ದೀರಿ” ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ನಾನು 23 ವರ್ಷಗಳ ಕಾಲ ವಾಸವಿದ್ದೆ. ಹಾಗೆಯೇ ತಮಿಳುನಾಡಿನಲ್ಲಿ 43 ವರ್ಷಗಳಿಂದ ಇದ್ದೇನೆ. ನಾನು ಕರ್ನಾಟಕದಿಂದ ಬಂದವನಾದರೂ ನನ್ನನ್ನು ಅದ್ಭುತವಾಗಿ ಸ್ವಾಗತಿಸಿದ್ದೀರಿ. ನನ್ನನ್ನು ಒಬ್ಬ ತಮಿಳಿಗನಂತೆ ಬದಲಿಸಿದ್ದೀರಿ. ನಾನು ಈಗ ಕಟ್ಟಾ ತಮಿಳಿಗನಾಗಿದ್ದೇನೆ ಎಂದರು. ರಾಜಕೀಯ ವ್ಯವಸ್ಥೆ ಹೊಲಸೆದ್ದು ಹೋಗಿದ್ದು ಅದನ್ನು ಶುದ್ಧಿ ಮಾಡಬೇಕಾದ ಅನಿವಾರ್ಯತೆ ಇದೆ. ತನ್ನನ್ನು ತಮಿಳುನಾಡಿನಿಂದ ಹೊರಟುಹೋಗುವಂತೆ ಕೆಲವರು ಹೇಳುತ್ತಿದ್ದಾರೆ. ಹಾಗೆ ಹೋಗುವ ಸಾಧ್ಯತೆಯೇ ಇಲ್ಲವೆಂದು ರಜನಿ ಹೇಳಿದರು.

ನಾನು ಏನೇ ಮಾತನಾಡಿದರೂ ಮಾಧ್ಯಮಗಳು ಅದನ್ನು ದೊಡ್ಡ ಸುದ್ದಿಯನ್ನಾಗಿ ಮಾಡುತ್ತಿವೆ. ಇದಕ್ಕೆ ರಾಜಕೀಯಗಳೇ ಕಾರಣ. ತಾನು ತುಂಬಾ ಶಿಸ್ತಿನಿಂದ ಇರುವುದರಿಂದಲೇ ಹೀಗಿದ್ದೇನೆ, ಸರ್ಕಾರದ ವಿರುದ್ಧ ಅಸಮಾಧಾನವೆದ್ದಾಗ ತಾನು ಧ್ವನಿಯಾಗುತ್ತೇನೆ, ನಿಮ್ಮಂತೆಯೇ ನನಗೂ ಸಹಾ ಜವಾಬ್ದಾರಿ, ಕೆಲಸಗಳಿವೆ, ಈಗ ಅವುಗಳ ಕಡೆ ಗಮನ ಹರಿಸೋಣ. ಆದರೆ ಹೋರಾಟ ಅನಿವಾರ್ಯವಾದ ಸಂದರ್ಭದಲ್ಲಿ ಆ ಕುರಿತು ನೋಡೋಣ ಎಂದರು.

Click for More Interesting News

Loading...
error: Content is protected !!