ಎನ್ಡಿಟಿವಿಗೆ ತಾತ್ಕಾಲಿಕ ರಿಲೀಫ್ |News Mirchi

ಎನ್ಡಿಟಿವಿಗೆ ತಾತ್ಕಾಲಿಕ ರಿಲೀಫ್

ನಿಯಮ ಉಲ್ಲಂಘಿಸಿ ಒಂದು ದಿನದ ನಿಷೇಧಕ್ಕೊಳಗಾಗಿದ್ದ ರಾಷ್ಟ್ರೀಯ ಸುದ್ದಿ ವಾಹಿನಿ ಎನ್ಡಿಟಿವಿ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಈ ತಿಂಗಳು 9 ರಂದು ಒಂದು ದಿನ ಚಾನೆಲ್ ನ ಪ್ರಸಾರ ನಿಲ್ಲಿಸಬೇಕೆಂದು ಕೇಂದ್ರ ಸರ್ಕಾರ ತೆಗೆದುಕೊಂಡಿದ್ದ ತೀರ್ಮಾನವನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸುತ್ತಿದೆ ಎನ್ನಲಾಗಿದೆ.

ಎನ್ಡಿಟಿವಿ ಮೇಲಿನ ನಿಷೇಧವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೂಲಗಳು ಹೇಳಿವೆ. ಎನ್ಡಿಟಿವಿ ಮೇಲಿನ ಒಂದು ದಿನದ ನಿಷೇಧ ಮರುಪರಿಶೀಲಿಸಬೇಕು ಎಂದು ಎನ್‌ಬಿಎ ಮನವಿ ಮಾಡಿತ್ತು.

Loading...
loading...
error: Content is protected !!