ಸೋನಿಯಾ ಕೃಪೆಯಿಂದಲೇ ಮುಖ್ಯಮಂತ್ರಿಯಾದೆ – News Mirchi

ಸೋನಿಯಾ ಕೃಪೆಯಿಂದಲೇ ಮುಖ್ಯಮಂತ್ರಿಯಾದೆ

ಮಂಡ್ಯ: ತಾವು ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ಕೃಪಾಕಟಾಕ್ಷವೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜೆಡಿಎಸ್ ನಲ್ಲಿ ಉಳಿದಿದ್ದರೆ ನಾನು ಮುಖ್ಯಮಂತ್ರಿಯಾಗಲು ಅವರು ನನ್ನನ್ನು ಬಿಡುತ್ತಿರಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ದೆಹಲಿ ಕೇವಲ ಅಲ್ಲಿನ ನಿವಾಸಿಗಳದ್ದಲ್ಲ, ಇಡೀ ದೇಶದ ನಾಗರಿಕರಿಗೆ ಸೇರಿದ್ದು: ಸುಪ್ರೀಂಗೆ ಕೇಂದ್ರ

ನಾಗಮಂಗಲದಲ್ಲಿ ಕನಕ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಅವರು ಮಾತನಾಡುತ್ತಿದ್ದರು. ಈ ವೇಳೆ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಮುಖ್ಯಮಂತ್ರಿ, 5 ವರ್ಷ ಆಡಳಿತ ಪೂರೈಸಿರುವುದರಿಂದಲೇ ಬಿಜೆಪಿಯವರಿಗೆ ನನ್ನನ್ನು ಕಂಡರೆ ಹೊಟ್ಟಕಿಚ್ಚು. ಕೆ.ಎಸ್.ಈಶ್ವರಪ್ಪನವರಿಗೆ ಬುದ್ದಿ ಇಲ್ಲ, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆಗೆ ಸಂಸ್ಕೃತಿ ಮತ್ತು ಸಂಸ್ಕಾರವೆಂಬುದೇ ಗೊತ್ತಿಲ್ಲ ಎಂದು ಜರಿದರು. ಜೈಲಿಗೆ ಹೋಗಿ ಬಂದವರು ತನ್ನನ್ನು ಕಮೀಷನ್ ಏಜೆಂಟ್ ಏಂದು ಜರಿಯುತ್ತಾರೆ ವ್ಯಂಗ್ಯವಾಡಿದರು.

Get Latest updates on WhatsApp. Send ‘Add Me’ to 8550851559

Loading...