ಲಾಲೂ ಕುಟುಂಬಕ್ಕೆ ಐಟಿ ಇಲಾಖೆಯಿಂದ ಮತ್ತೊಂದು ಶಾಕ್ – News Mirchi

ಲಾಲೂ ಕುಟುಂಬಕ್ಕೆ ಐಟಿ ಇಲಾಖೆಯಿಂದ ಮತ್ತೊಂದು ಶಾಕ್

ಆರ್.ಜೆ.ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಕುಟುಂಬಕ್ಕೆ ಆದಾಯ ತೆರಿಗೆ ಇಲಾಖೆ ಮತ್ತೊಂದು ಶಾಕ್ ನೀಡಿದೆ. ದೆಹಲಿ, ಪಾಟ್ನಾಗಳಲ್ಲಿನ ಕೋಟ್ಯಂತರ ಮೌಲ್ಯದ ಆಸ್ತಿಗಳನ್ನು ಐಟಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.

ಅಷ್ಟೇ ಅಲ್ಲದೆ ಲಾಲೂ ಪುತ್ರಿ ಮೀಸಾ ಭಾರತಿ, ಆಕೆಯ ಪತಿ ಶೈಲೇಶ್ ಕುಮಾರ್ ಆಸ್ತಿಗಳಿಗೆ ಅಂತಿಮ ಮುಟ್ಟುಗೋಲು ಆದೇಶವನ್ನು ಜಾರಿ ಮಾಡಿದೆ. ಬೇನಾಮಿ ಆಸ್ತಿಗಳ ಪ್ರಕರಣದ ತನಿಖೆಯ ಭಾಗವಾಗಿ ಆದಾಯ ತೆರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ.

ಶೀಘ್ರದಲ್ಲೇ ಲಾಲೂ ಪ್ರಸಾದ್ ಯಾದವ್ ವಿರುದ್ಧ ಆದಾಯ ತೆರಿಗೆ ಆರೋಪ ಪಟ್ಟಿ ಸಲ್ಲಿಸಲು ಸಿದ್ಧವಾಗುತ್ತಿದೆ. ಇದೇ ತಿಂಗಳ 5 ರಂದು ಸೌತ್ ವೆಸ್ಟ್ ದೆಹಲಿಯಲ್ಲಿನ ಬಿಜ್ವಾಸಾನ್ ಪ್ರದೇಶದಲ್ಲಿ ಮೀಸಾ ಭಾರತಿಯವರ ಫಾರ್ಮ್ ಹೌಸ್ ಅನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿತ್ತು.

Get Latest updates on WhatsApp. Send ‘Add Me’ to 8550851559

Contact for any Electrical Works across Bengaluru

Loading...
error: Content is protected !!