ಡಿಕೆಶಿ ಮೇಲೆ ಐಟಿ ದಾಳಿ: ವಿವಿಧ ಸ್ಥಳಗಳಿಂದ 11 ಕೋಟಿ ನಗದು ವಶ – News Mirchi

ಡಿಕೆಶಿ ಮೇಲೆ ಐಟಿ ದಾಳಿ: ವಿವಿಧ ಸ್ಥಳಗಳಿಂದ 11 ಕೋಟಿ ನಗದು ವಶ

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಇದುವರೆಗೂ ಸುಮಾರು 11 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ. ನಿನ್ನೆ ಆರಂಭವಾಗಿರುವ ತೆರಿಗೆ ಇಲಾಖೆ ದಾಳಿ ಎರಡನೇ ದಿನವೂ ಮುಂದುವರೆದಿದ್ದು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡಿರುವ 11 ಕೋಟಿಯಲ್ಲಿ 8.33 ಕೋಟಿ ರೂಪಾಯಿ ದೆಹಲಿಯಲ್ಲಿ ಮತ್ತು ರೂ.2.5 ಕೋಟಿ ಬೆಂಗಳೂರಿನಲ್ಲಿ ಮತ್ತು ಮೈಸೂರಿನಲ್ಲಿ 60 ಲಕ್ಷ ನಗದು ಸೇರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಾಳಿ ವೇಳೆ ಪತ್ತೆಯಾದ ಒಡವೆಗಳ ಮೌಲ್ಯಮಾಪನ ನಡೆಯುತ್ತಿದೆ ಎಂದು ಹೇಳಲಾಗಿದೆ. ಸಿಂಗಾಪುರ ಮತ್ತಿತರೆ ವಿದೇಶಗಳಲ್ಲಿ ಮಾಡಿರುವ ಹೂಡಿಕೆ, ಬೇನಾಮಿ ಆಸ್ತಿಗಳು ಸೇರಿದಂತೆ ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಡಿ.ಕೆ. ಸಹೋದರರು ಮತ್ತು ಈಗಲ್ ಟನ್ ರೆಸಾರ್ಟ್ ಮೇಲೆ ಐಟಿ ದಾಳಿ

ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಅವರಿಗೆ ಪತ್ರ ಬರೆದಿರುವ ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಅವರು, ಕಾನೂನು ಸುವ್ಯವಸ್ಥೆ ರಾಜ್ಯ ಪೊಲೀಸರ ಕರ್ತವ್ಯವಾಗಿದ್ದು ಆದಾಯ ತೆರಿಗೆ ದಾಳಿ ವೇಳೆ ಸಿ.ಆರ್.ಪಿ.ಎಫ್ ಸಿಬ್ಬಂದಿಯನ್ನು ಬಳಸಿಕೊಂಡಿರುವುದೇಕೆಂದು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.

ದಾಳಿ ಕುರಿತು ಪ್ರತಿಕ್ರಿಯಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ತೆರಿಗೆ ವಂಚನೆ, ರಿಯಲ್ ಎಸ್ಟೇಟ್ ಮತ್ತಿತರ ಕ್ಷೇತ್ರಗಳಲ್ಲಿನ ಹೊಂದಿರುವ ಅಘೋಷಿತ ಹೂಡಿಕೆಗಳ ಕುರಿತ ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರಿಗೆ ಸೇರಿದ ನಿಷ್ಕ್ರಿಯ ಕಂಪನಿಗಳ ಕುರಿತೂ ತನಿಖೆ ನಡೆಯುತ್ತಿದೆ ಎಂದು ನಿನ್ನೆ ಇಲಾಖೆಯ ಮೂಲಗಳು ಹೇಳಿದ್ದವು.

ಪಾಕ್ ಸರ್ಕಾರಿ ವೆಬ್ಸೈಟ್ ಹ್ಯಾಕ್, ಭಾರತದ ರಾಷ್ಟ್ರಗೀತೆ

ಐಟಿ ಇಲಾಖೆ ದಾಳಿಗೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್, ದೆಹಲಿಯಲ್ಲಿ ಸಿಕ್ಕ ಹಣ ಯಾರದ್ದೋ ನಮಗೆ ಗೊತ್ತಿಲ್ಲ, ಅದು ನಮ್ಮನೆಯಲ್ಲಿ ಸಿಕ್ಕಿದ್ದಲ್ಲ. ನಮ್ಮ ಮನೆ ಸೇರಿದಂತೆ ಎಲ್ಲೂ ಯಾರಿಗೂ ಏನೂ ಸಿಕ್ಕಿಲ್ಲ. ಹುಡುಕಿ ಹುಡುಕಿ ಅವರು ಬರಿಗೈಯಲ್ಲಿ ಹೋಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

Loading...