ಸೇನೆ ಸೇರಿ ನಮ್ಮ ತಂದೆಯನ್ನು ಕೊಂದ ಪಾಕ್ ವಿರುದ್ಧ ಸೇಡು ತೀರಿಸ್ಕೊಳ್ತೀನಿ…

ಶಿಮ್ಲಾ: ತಾನು ಸೇನೆಯಲ್ಲಿ ಸೇರಿ ತನ್ನ ತಂದೆಯನ್ನು ಕೊಂದ ಪಾಕಿಸ್ತಾನದ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಸುಬೇದಾರ್ ಶಶಿಕುಮಾರ್ ಪುತ್ರ ಅಕ್ಷಯ್ ಕುಮಾರ್ ಹೇಳಿದ್ದಾನೆ. ಜಮ್ಮೂ ಕಾಶ್ಮೀರದ ರಾಜೌರಿ ಸೆಕ್ಟಾರ್ ನಲ್ಲಿ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಯಲ್ಲಿ ಸುಬೇದಾರ್ ಶಶಿಕುಮಾರ್ ಹುತಾತ್ಮರಾಗಿದ್ದರು. ಸುಬೇದಾರ್ ಮೃತದೇಹ ಸ್ವಗ್ರಾಮಕ್ಕೆ ತಲುಪಿದ್ದು, ಹಿಮಾಚಲ ಪ್ರದೇಶದ ಹಮೀರ್ಪುರದಲ್ಲಿ ವಿಷಾದದ ಛಾಯೆ ಆವರಿಸಿದೆ.

ಆದರೆ ಶಶಿಕುಮಾರ್ ಪುತ್ರ ಮಾತ್ರ, ತಂದೆಯ ಸಾವಿಗೆ ಕಾರಣವಾದ ಪಾಕಿಸ್ತಾನದ ವಿರುದ್ಧ ಹೋರಾಡಲು ಸಿದ್ಧವಿರುವುದಾಗಿ ಹೇಳಿದ್ದಾನೆ. ಪಾಕ್ ಕದನ ವಿರಾಮ ಉಲ್ಲಂಘಿಸಿದ್ದರಿಂದಲೇ ತನ್ನ ತಂದೆಯನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾನೆ. ಭಾರತೀಯ ಸೇನೆಯಲ್ಲಿ ಸೇರಿ, ತಂದೆಯನ್ನು ಕೊಂದವರ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂದು ಹೇಳಿದ್ದಾನೆ. ಸುಬೇದರ್ ಶಶಿಕುಮಾರ್ ಅಂತ್ಯಕ್ರಿಯೆಗಳನ್ನು ಅವರ ಸ್ವಗ್ರಾಮದಲ್ಲಿ ನೆರವೇರಿಸಲಿದ್ದಾರೆ.