ಬೇಕು ಎನಿಸಿದರೆ ಗೋಮಾಂಸ ತಿನ್ನುತ್ತೇನೆ, ಕೇಳಲು ಇವರು ಯಾರು? |News Mirchi

ಬೇಕು ಎನಿಸಿದರೆ ಗೋಮಾಂಸ ತಿನ್ನುತ್ತೇನೆ, ಕೇಳಲು ಇವರು ಯಾರು?

ಗೋಮಾಂಸ ತಿನ್ನಬೇಕು ಎನಿಸಿದರೆ ತಿನ್ನುತ್ತೇನೆ, ತಿನ್ನಬೇಡಿ ಎನ್ನಲು ಇವರು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರು ಹಿಂದೂವಾಗಿದ್ದರೆ ಗೋಹತ್ಯೆ ನಿಷೇಧ ಕಾಯ್ದೆಗೆ ವಿರೋಧ ಪಡಿಸಿದ್ದಾದರೂ ಏಕೆ ಎಂದು ಪ್ರಶ್ನಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಶ್ನೆಗೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಮೋದಿಯ ಆ ಒಂದು ಫೋನ್ ಕರೆ ಸಾವಿರಾರು ಭಾರತೀಯರ ರಕ್ಷಣೆಗೆ ನೆರವಾಯಿತು

ನಮ್ಮ ಆಹಾರ ಪದ್ಧತಿಯನ್ನು ಪ್ರಶ್ನಿಸಲು ಇವರು ಯಾರು? ಹಿಂದೂಗಳಲ್ಲಿ ಬಹಳಷ್ಟು ಜನ ಗೋಮಾಂಸ ತಿನ್ನುತ್ತಾರೆ, ನನಗೆ ತಿನ್ನಬೇಕೆನಿಸಿದರೆ ನಾನೂ ತಿನ್ನುತ್ತೇನೆ. ಬೇಡ ಎನ್ನಲು ಇವರು ಯಾರು ಎಂದು ಟ್ಟೀಟ್ ಮಾಡಿ ಪ್ರಶ್ನಿಸಿರುವ ಮುಖ್ಯಮಂತ್ರಿಗಳು, ತಮಗೆ ಬೀಫ್ ಇಷ್ಟವಿಲ್ಲ ಹಾಗಾಗಿ ಅದನ್ನು ಸೇವಿಸುವುದಿಲ್ಲ ಎಂಬುದನ್ನೂ ಸೇರಿಸಿದ್ದಾರೆ.

ಯೋಗಿ ಆದಿತ್ಯನಾಥ್ – ಸಿದ್ದರಾಮಯ್ಯ ಟ್ವಿಟರ್ ವಾರ್

ಗೋರಕ್ಷಣೆ ಕುರಿತು ಮಾತನಾಡುವ ನೈತಿಕತೆ ಆದಿತ್ಯನಾಥ್ ಅವರಿಗೇನಿದೆ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ತಾವೂ ದನ ಸಾಕಿ ಸಗಣಿ ಬಾಚಿದ್ದಾಗಿ ಹೇಳಿಕೊಂಡಿದ್ದಾರೆ. ಗೋಹತ್ಯೆ ವಿಷಯದ ಕುರಿತು ಮಾತನಾಡುವ ಮೊದಲು ಯೋಗಿ ಆದಿತ್ಯನಾಥ್ ವಿವೇಕಾನಂದರು ಏನು ಹೇಳಿದ್ದರು ಎಂಬುದನ್ನು ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!