ಡಿಕೆ ರವಿಯವರದ್ದು ಆತ್ಮಹತ್ಯೆ: ಸಿಬಿಐ ವರದಿ ಮಂಡಿಸಿದ ಸರ್ಕಾರ

ಐಎಎಸ್ ಅಧಿಕಾರಿ ಡಿಕೆ ರವಿ ಅವರು ಮಾನಸಿಕ ಒತ್ತಡಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರ ಶನಿವಾರ ವಿಧಾನಸಭೆಗೆ ಹೇಳಿದೆ.

35 ವರ್ಷದ ಐಎಎಸ್ ಅಧಿಕಾರಿ ಡಿಕೆ ರವಿ ಅವರು ಕಳೆದ ಮಾರ್ಚ್ ನಲ್ಲಿ ತಮ್ಮ ಫ್ಲ್ಯಾಟ್ ನಲ್ಲಿನ ಕೊಠಡಿಯಲ್ಲಿ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದರು.

ಪ್ರಾಮಾಣಿಕ ಅಧಿಕಾರಿ ಎಂದು ಹೆಸರುವಾಸಿಯಾಗಿದ್ದ ರವಿಯವರ ಸಾವು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ರಾಜ್ಯದ ಜನತೆಯ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ, ತಡವಾಗಿ ಸಿಬಿಐ ತನಿಖೆಗೆ ಒಪ್ಪಿಸಿತ್ತು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಶನಿವಾರ ವಿಧಾನಸಭೆಯಲ್ಲಿ ಗೃಹ ಸಚಿವರ ಅನುಪಸ್ಥಿತಿಯಲ್ಲಿ ಸಿಬಿಐ ಸಲ್ಲಿಸಿದ್ದ ತನಿಖಾ ವರದಿಯನ್ನು ಮಂಡಿಸಿದರು.

ಸಿಬಿಐ ವರದಿಯಲ್ಲಿ ತಿಳಿಸಿರುವಂತೆ, ವೈದ್ಯರ, ಫೋರೆನ್ಸಿಕ್ ಲ್ಯಾಬ್ ರಿಪೋರ್ಟ್ ಮತ್ತು ತನಿಖೆಯ ವೇಳೆಯಲ್ಲಿ ದಾಖಲಾದ ಹೇಳಿಕೆಗಳ ಪ್ರಕಾರ ಐಎಎಸ್ ಅಧಿಕಾರಿ ಮಾನಸಿಕ ಒತ್ತಡಗಳಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಟಿಬಿ ಜಯಚಂದ್ರ ಹೇಳಿದರು.

ಗೃಹ ಸಚಿವರ ಹೇಳಿಕೆಯನ್ನು ಸಚಿವ ಜಯಚಂದ್ರ ರವರು ಓದುತ್ತಿದ್ದಾಗ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸರ್ಕಾರ ಸಾಕ್ಷಿಗಳನ್ನೆಲ್ಲಾ ನಾಶ ಪಡಿಸಿದ ನಂತರ ತಡವಾಗಿ ಸಿಬಿಐ ಗೆ ಪ್ರಕರಣ ಒಪ್ಪಿಸಿತು ಎಂದು ಆರೋಪಿಸಿದರು.

Related News

Comments (wait until it loads)
Loading...
class="clear">