ಮಹಿಳಾ ಕ್ರಿಕೆಟ್ ನಲ್ಲಿ ಮಿಥಾಲಿ ವಿಶ್ವದಾಖಲೆ |News Mirchi

ಮಹಿಳಾ ಕ್ರಿಕೆಟ್ ನಲ್ಲಿ ಮಿಥಾಲಿ ವಿಶ್ವದಾಖಲೆ

ಮಹಿಳಾ ಅಂತರಾಷ್ಟ್ರೀಯ ಏಕ ದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಭಾರತದ ಮಿಥಾಲಿ ರಾಜ್ ಬುಧವಾರ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಮಹಿಳಾ ವಿಶ್ವಕಪ್ 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮಿಥಾಲಿ ಈ ಸಾಧನೆಯ ಮೆಟ್ಟಿಲೇರಿದ್ದಾರೆ.

ಪಂದ್ಯ ಆರಂಭಕ್ಕೂ ಮುನ್ನ ಇದುವರೆಗೂ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿದ್ದ ಇಂಗ್ಲೆಂಡ್ ನ ಆಟಗಾರ್ತಿ ಚಾರ್ಲೊಟೆ ಎಡ್ವರ್ಡ್ ಅವರ ದಾಖಲೆ ಮುರಿಯಲು ಕೇವಲ 33 ರನ್ ಗಳಿಂದ ಹಿಂದಿದ್ದರು. ಈಗ ಇಂಗ್ಲೆಂಡ್ ಆಟಗಾರ್ತಿಯ 5992 ರನ್ ಗಳ ದಾಖಲೆ ಮುರಿದಿದ್ದಲ್ಲದೆ ಏಕದಿನ ಕ್ರಿಕೆಟ್ ನಲ್ಲಿ 6,000 ರನ್ ಗಡಿ ದಾಟಿದ ಮೊದಲ ಮಹಿಳಾ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.

ಜಿಯೋ ಗ್ರಾಹಕರ ಮಾಹಿತಿ ಸೋರಿಕೆ, ಶಂಕಿತನ ಬಂಧನ

ಕೊನೆಗೂ ರವಿಶಾಸ್ತ್ರಿ ನೇಮಕ ದೃಢಪಡಿಸಿದ ಬಿಸಿಸಿಐ

ಈ ಹಿಂದೆ ಸತತ 7 ಬಾರಿ ಅರ್ಧ ಶತಕ ಗಳಿಸಿದ ಸಾಧನೆಯನ್ನು ಮಿಥಾಲಿ ಮಾಡಿದ್ದರು. ಮಹಿಳಾ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಅರ್ಧ ಶತಕ (48) ಗಳಿಸಿದ ಹೆಸರು ಮಿಥಾಲಿಯವರ ಖಾತೆಯಲ್ಲಿದೆ. 34 ವರ್ಷದ ಮಿಥಾಲಿ ರಾಜ್ ತಮ್ಮ 16ನೇ ವಯಸ್ಸಿನಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಮಹಿಳಾ ಕ್ರಿಕೆಟ್ ನ ಸಚಿನ್ ತೆಂಡೂಲ್ಕರ್ ಎಂದು ಆಕೆಯನ್ನು ಕರೆಯುತ್ತಾರೆ.

Loading...
loading...
error: Content is protected !!