ಜಿಯೋಗೆ ಸ್ಪರ್ಧೆ ನೀಡಲು ಬರುತ್ತಿದೆ ಐಡಿಯಾ 4ಜಿ ಫೋನ್ |News Mirchi

ಜಿಯೋಗೆ ಸ್ಪರ್ಧೆ ನೀಡಲು ಬರುತ್ತಿದೆ ಐಡಿಯಾ 4ಜಿ ಫೋನ್

ಇದುವರೆಗೂ 4G VoLTE ಮೊಬೈಲ್ ಬಳಕೆದಾರರನ್ನೇ ಟಾರ್ಗೆಟ್ ಮಾಡಿದ್ದ ರಿಲಯನ್ಸ್, ಇದೀಗ ಫೀಚರ್ ಫೋನ್ ಬಿಡುಗಡೆಗೆ ಮುಂದಾಗುವ ಮೂಲಕ 2ಜಿ ಗ್ರಾಹಕರನ್ನೂ 4ಜಿಯತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ರೂ. 1500 ರೀಫಂಡೆಬಲ್ ಡಿಪಾಸಿಟ್ ನೊಂದಿಗೆ 4G VoLTE ಫೀಚರ್ ಫೋನ್ ಅನ್ನು ಬಿಡುಗಡೆ ಮಾಡಿದ್ದು, ಮುಂದಿನ ತಿಂಗಳಲ್ಲಿ ಈ ಫೋನ್ ಗ್ರಾಹಕರ ಕೈಸೇರಲಿದೆ.

  • No items.

ಇದೀಗ ಜಿಯೋಗೆ ಸೆಡ್ಡು ಹೊಡೆಯಲು ಐಡಿಯಾ ಸಂಸ್ಥೆ ಮುಂದಾಗಿದೆ. ತನ್ನದೇ ಆದ 4ಜಿ ಫೋನ್ ಅನ್ನು ಐಡಿಯಾ ಪ್ರಕಟಿಸಿದೆ. ಆದರೆ ಈ ಎರಡೂ ಫೋನ್ ಗಳಿಗಿರುವ ವ್ಯತ್ಯಾಸವೆಂದರೆ ಬೆಲೆ.

ಜಿಯೋ ಫೋನ್ ಉಚಿತವಾಗಿ(ಮೂರು ವರ್ಷಗಳ ನಂತರ ಡಿಪಾಸಿಟ್ ಮಾಡಿದ 1500 ಹಿಂದಿರುಗಿಸುತ್ತಾರೆ) ಲಭಿಸುತ್ತಿದ್ದರೆ, ಐಡಿಯಾ 4ಜಿ ಫೋನ್ ಗೆ ಯಾವುದೇ ರಿಯಾಯಿತಿ ಇಲ್ಲ. ಐಡಿಯಾ 4ಜಿ ಮೊಬೈಲ್ ಬೆಲೆ ಸುಮಾರು ರೂ. 2,500 ಇರಬಹುದು ಎಂದು ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಹಿಮಾನ್ಷು ಕಪಾನಿಯಾ ಸ್ಪಷ್ಟಪಡಿಸಿದ್ದಾರೆ. ಮೊಬೈಲ್ ತಯಾರಿಕೆಗಾಗಿ ಈಗಾಗಲೇ ಒಂದು ಮೊಬೈಲ್ ತಯಾರಿಕಾ ಕಂಪನಿಯ ಜೊತೆ ಕೆಲಸ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.

ಅರುಣ್ ಜೇಟ್ಲಿಯವರನ್ನು ನಿಂದಿಸುವಂತೆ ಸೂಚಿಸಿದ್ದೇ ಕೇಜ್ರಿವಾಲ್: ಜೇಠ್ಮಲಾನಿ

ಜಿಯೋ ಫೋನ್ ನಲ್ಲಿ ಇಲ್ಲದಿರುವ ಫೀಚರ್ ಗಳನ್ನು ಐಡಿಯಾ 4ಜಿ ಫೋನ್ ನಲ್ಲಿ ನೀಡಲಿದ್ದಾರಂತೆ. ಗೂಗಲ್, ಫೇಸ್ಬುಕ್, ವಾಟ್ಸಾಪ್ ನಂತಹ ಫೀಚರ್ ಗಳನ್ನೂ ಈ ಪೋನ್ ನಲ್ಲಿ ಅಳವಡಿಸುತ್ತಿರುವುದು ವಿಶೇಷ. ಆದರೆ ಜಿಯೋಗೆ ಹೋಲಿಸಿದರೆ ಬೆಲೆ ಸ್ವಲ್ಪ ಜಾಸ್ತಿ. ಅಷ್ಟೇ ಅಲ್ಲದೆ ಈ ಫೋನ್ ನಲ್ಲಿ ಗ್ರಾಹಕರು ತಮಗಿಷ್ಟವಾದ ನೆಟ್ವರ್ಕ್ ಅನ್ನೂ ಬಳಸಬಹುದಂತೆ.

Loading...
loading...
error: Content is protected !!