ಐಡಿಯಾದಿಂದ ಮಾಡಿ ಅನ್ಲಿಮಿಟೆಡ್ ಕಾಲ್ಸ್ |News Mirchi

ಐಡಿಯಾದಿಂದ ಮಾಡಿ ಅನ್ಲಿಮಿಟೆಡ್ ಕಾಲ್ಸ್

​ಟೆಲಿಕಾಂ ಕ್ಷೇತ್ರಕ್ಕೆ ರಿಲಯನ್ಸ್ ಜಿಯೋ ಅದ್ಯಾವ ಗಳಿಗೆಯಲ್ಲಿ ಎಂಟ್ರಿಯಾಯಿತೋ, ಅಂದಿನಿಂದ ಇತರೆ ಟೆಲಿಕಾಂ ಕಂಪನಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಜಿಯೋ ಎದುರು ನಿಲ್ಲಲು, ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ನಾನಾ ಆಫರ್ ಗಳನ್ನು ಪ್ರಕಟಿಸುತ್ತಿವೆ. ಹಿಂದಿನ ದರಗಳಿಗೆ ಹೊಲಿಸಿದರೆ ಸುಮಾರು ಅರ್ಧದಷ್ಟು ದರ ಕಡಿತ ಮಾಡಿವೆ. ರಿಲಯನ್ಸ್ ಗೆ ಸೆಡ್ಡು ಹೊಡೆಯಲು ಏರ್ಟೆಲ್ ಮತ್ತು ವೊಡೋಫೋನ್ ಗಳ ನಂತರ ಇದೀಗ ಐಡಿಯಾ ಮುಂದಾಗಿದೆ.

ಐಡಿಯಾ ಇದೀಗ ಎರಡು ವಿಶೇಷ ಆಫರ್ ಪ್ರಕಟಿಸಿದೆ. ₹148 ರಿಚಾರ್ಜ್ ಮಾಡಿಸಿದರೆ ಐಡಿಯಾ ದಿಂದ ಐಡಿಯಾಗೆ ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳು ಉಚಿತ. ಇದರ ಜೊತೆಗೆ 50 ಎಂ.ಬಿ ಡಾಟಾ ಉಚಿತ. ಒಂದು ವೇಳೆ 4ಜಿ ಮೊಬೈಲ್ ನಲ್ಲಿ ರೀಚಾರ್ಜ್ ಮಾಡಿಸಿದ್ದೇ ಆದರೆ 300 ಎಂ.ಬಿ ಡಾಟಾ ಉಚಿತವಾಗಿ ಪಡೆಯಬಹುದು.

ಮತ್ತೊಂದು ಆಫರ್ ₹348 ರದ್ದು. ಇದರಲ್ಲಿ ಯಾವುದೇ ನೆಟ್ವರ್ಕ್ ಗೆ ಎಸ್‌ಟಿಡಿ ಮತ್ತು ಸ್ಥಳೀಯ ಅನಿಯಮಿತ ಕರೆಗಳನ್ನು ಮಾಡಬಹುದು. ಇದರ ಜೊತೆಗೆ 50 ಎಂ.ಬಿ ಡಾಟಾ ಪಡೆಯಬಹುದು. 4ಜಿ ಮೊಬೈಲ್ ಹೊಂದಿದ್ದರೆ1 ಜಿಬಿ ಇಂಟರ್ನೆಟ್ ಉಚಿತ. ಈ ಎರಡೂ ಪ್ಯಾಕ್ ಗಳ ವ್ಯಾಲಿಡಿಟಿ 28.

Loading...
loading...
error: Content is protected !!