ನಾನು ಮಾತಾಡಿದ್ರೆ ಭೂಕಂಪಾನೇ, ಮಾತಾಡೋಕೇ ಬಿಡ್ತಿಲ್ಲ – News Mirchi

ನಾನು ಮಾತಾಡಿದ್ರೆ ಭೂಕಂಪಾನೇ, ಮಾತಾಡೋಕೇ ಬಿಡ್ತಿಲ್ಲ

ನೋಟು ರದ್ದು ನಂತರ ಸಂಸತ್ತಿನಲ್ಲಿ ಗದ್ದಲಗಳು ಮುಂದುವರೆದಿವೆ. ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಪರಸ್ಪರ ಆರೋಪಗಳಿಂದ ಅರ್ಥಪೂರ್ಣ ಕಲಾಪಗಳು ನಡೆಯುವುದರಲ್ಲಿ ವಿಫಲವಾಗಿವೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೇಲೆ ಟೀಕಾ ಪ್ರಹಾರ ಮುಂದುವರೆಸಿದ್ದು, ಲೋಕಸಭೆಯಲ್ಲಿ ಮಾತನಾಡಲು ತಮಗೆ ಅವಕಾಶ ನೀಡುತ್ತಿಲ್ಲ ಎಂದು ದೂರಿದ್ದಾರೆ.

ಸಂಸತ್ತಿನ ಹೊರಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ರಾಹುಲ್ ಗಾಂಧಿ, ‘ನಾನು ಮಾತನಾಡಿದರೆ ಭೂಕಂಪವಾಗುತ್ತದೆ’ ಎಂದು ಹೇಳಿದ್ದಾರೆ.

ಸರ್ಕಾರವು ಚರ್ಚೆಯಿಂದ ಪರಾರಿಯಾಗುತ್ತಿದೆ. ಅವರು ನನಗೆ ಮಾತನಾಡಲು ಅವಕಾಶ ನೀಡಿದರೆ, ಭೂಕಂಪ ಬರುವುದನ್ನು ನೀವು ಕಾಣುವಿರಿ ಎಂದು ಹೇಳಿದರು.

ನೋಟು ರದ್ದು ತೀರ್ಮಾನವನ್ನು ದೇಶದ ಬಹುದೊಡ್ಡ ಹಗರಣ ಎಂದು ಕರೆದ ರಾಹುಲ್, ತಾನು ಸಂಸತ್ತಿನಲ್ಲಿ ಮಾತನಾಡಬೇಕು ಎಂದರು. ಕಳೆದ ಒಂದು ತಿಂಗಳಿನಿಂದ ನೋಟು ರದ್ದು ಕುರಿತು ಚರ್ಚಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಜನರಿಗೆ ಸತ್ಯಾಸತ್ಯತೆ ತಿಳಿಸಲು ನಾವು ಬಯಸುತ್ತೇವೆ. ದೇಶದ ವಿವಿದ ಭಾಗಗಳಲ್ಲಿ ಮಾತನಾಡುತ್ತಿರುವ ಪ್ರಧಾನಿ, ಲೋಕಸಭೆಯಲ್ಲೇಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

Loading...

Leave a Reply

Your email address will not be published.