ಸೆಲ್ಫೀ ಪ್ರೇಮಿಗಳಿಗೆ ನಿಜವಾದ ಸಂಗಾತಿ ವಿವೋ ವಿ-5

ಸೆಲ್ಫೀ ಗೀಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ನಾವು ಮೊಬೈಲ್ ಖರೀದಿಸಲು ಹೋದಾಗ ಮೊದಲು ನೋಡುವುದೇ ಫ್ರಂಟ್ ಕ್ಯಾಮೆರಾ ಸಾಮರ್ಥ್ಯದ ಬಗ್ಗೆ. ನಮ್ಮ ದೈನಂದಿನ ಜೀವನದಲ್ಲಿ ವಿಶೇಷ ಕ್ಷಣಗಳನ್ನು ಸೆರೆಹಿಡಿಯಲು ಮೊಬೈಲ್ ಗಳಲ್ಲಿ ಉತ್ತಮ ಸೆಲ್ಫೀ ಕ್ಯಾಮೆರಾ ಹೊಂದಿರುವುದು ಈಗ ಪ್ರಮುಖ ವಿಷಯವಾಗಿದೆ.

ನೀವು ಸಾಕಷ್ಟು ಉತ್ತಮ ಕ್ಯಾಮೆರಾಗಳ ಮೊಬೈಲ್ ಗಳನ್ನು ಬಳಸಿರುತ್ತೀರಿ. ಅವು ಎಲ್ಲಾ ಬೆಳಕಿನಲ್ಲಿ ಬಹಳ ಚೆನ್ನಾಗಿ ಕೆಲಸ ಮಾಡಿರಲೂ ಬಹುದು. ಆದರೆ ನೀವು ರಾತ್ರಿ ವೇಳೆ ಹೆಚ್ಚು ಬೆಳಕಿಲ್ಲದ ಸಂದರ್ಭಗಳಲ್ಲಿ ಉತ್ತಮ ಸೆಲ್ಫೀಗಳಿಗಾಗಿ ಏನು ಮಾಡ್ತೀರಿ? ಇಂತಹ ಸಂದರ್ಭಗಳಲ್ಲಿ ಉತ್ತಮ ಗುಣಮಟ್ಟದ ಸೆಲ್ಫೀ ತೆಗೆಯುವಂತಹ ಮೊಬೈಲ್ ಗಳು ಅತಿ ಕಡಿಮೆ.

ನೀವು ಸೆಲ್ಫೀ ಪ್ರೇಮಿಯಾಗಿದ್ದರೆ ವಿವೊ V5 ನಿಮ್ಮ ನಿಜವಾದ ಸಂಗಾತಿಯಾಗಬಲ್ಲದು. ಫ್ರಂಟ್ ಕ್ಯಾಮೆರಾ ಜೊತೆ ಫ್ಲ್ಯಾಷ್ ಇರುವಂತಹ ಹಲವು ಮೊಬೈಲ್ ಗಳು ಇರಬಹುದು. ಆದರೆ ಅವುಗಳ ಗುಣಮಟ್ಟ ಎಲ್ಲಾ ಸಂದರ್ಭಗಳಲ್ಲೂ ಉತ್ತಮವಾಗಿರುವುದಿಲ್ಲ 20 ಮೆಗಾ ಪಿಕ್ಸೆಲ್ ನ ಮೂನ್ ಲೈಟ್ ಕ್ಯಾಮೆರಾ ಇರುವ ವಿ5 ನಿಂದ ಸ್ವಾಭಾವಿಕವಾಗಿ ಕಾಣುವಂತಹ ಸೆಲ್ಫೀಗಳನ್ನು ತೆಗೆಯಬಹುದು. ಸೆಲ್ಫೀಗಳಿಗಾಗಿ ಇದರಲ್ಲಿ ಫೇಸ್ ಬ್ಯೂಟಿ ಮೋಡ್ ಇರುವುದರಿಂದ ಸುಂದರವಾಗಿ ಸೆಲ್ಫೀ ಮೂಡಿಬರಲು ಇದರಲ್ಲಿ ಹಲವು ಅಯ್ಕೆಗಳಿರುತ್ತವೆ.

ರೂ. 17,999 ಗೆ ಸಿಗುವ ಈ 4ಜಿ ಸ್ಮಾರ್ಟ್ ಫೋನಿನಲ್ಲಿ 64 ಬಿಟ್ 1.5GHz ಆಕ್ಟಾ ಕೋರ್ ಮೀಡಿಯಾ ಟೆಕ್ 6750 ಪ್ರೊಸೆಸರ್ ನೊಂದಿಗೆ 4 ಜಿಬಿ ರ‌್ಯಾಮ್ ಇದೆ.

ಸ್ಟೋರೇಜ್ ವಿಷಯಕ್ಕೆ ಬಂದರೆ 32 ಜಿಬಿ ಇಂಟರ್ನಲ್ ಸ್ಟೋರೇಜ್, ಮತ್ತು 128 ವಿಸ್ತರಿಸಬಲ್ಲ ಸಾಮರ್ಥ್ಯವಿದೆ.

Loading...
error: Content is protected !!