ಜಲ್ಲಿಕಟ್ಟು ವಿರೋಧಿಸುವವರು ಬಿರ್ಯಾನಿ ಬಿಡಿ : ಕಮಲ್ ಹಾಸನ್ – News Mirchi

ಜಲ್ಲಿಕಟ್ಟು ವಿರೋಧಿಸುವವರು ಬಿರ್ಯಾನಿ ಬಿಡಿ : ಕಮಲ್ ಹಾಸನ್

ತಮಿಳುನಾಡಿನಲ್ಲಿ ನಿಷೇಧವಾಗಿರುವ ಸಾಂಪ್ರದಾಯಿಕ ಜಲ್ಲಿಕಟ್ಟು ಆಟವನ್ನು ಸಮರ್ಥಿಸಿಕೊಂಡಿರುವ ನಟ ಕಮಲ್ ಹಾಸನ್, ತಾವು ಜಲ್ಲಿಕಟ್ಟು ಆಟದ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ. ಯಾರು ಜಲ್ಲಿಕಟ್ಟು ಆಟಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೋ, ಅವರು ಬಿರ್ಯಾನಿ ತಿನ್ನುವುದನ್ನೂ ಬಿಡಬೇಕು ಎಂದು ಹೇಳಿದ್ದಾರೆ.

ಸ್ಪೇನ್ ದೇಶದಲ್ಲಿ ನಡೆಯುವ ಗೂಳಿ ಕಾಳಗದಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡುತ್ತಾರೆ, ಕೆಲವೊಮ್ಮೆ ಅವು ಸಾಯಲೂಬಹುದು. ಆದರೆ ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟಿನಲ್ಲಿ ಗೂಳಿಗಳನ್ನು ದೇವರಂತೆ, ತಮ್ಮ ಕುಟುಂಬ ಸದಸ್ಯನಂತೆ ಕಾಣುತ್ತಾರೆ. ಇಲ್ಲಿ ಪ್ರಾಣಿಗಳನ್ನು ಪಳಗಿಸುತ್ತಾರೇ ವಿನಹ ಹಿಂಸಿಸುವುದಿಲ್ಲ. ಜಲ್ಲಿಕಟ್ಟು ನಿಷೇಧಿಸಿದರೆ ‌‌‌ಬಿರ‌್ಯಾನಿಯನ್ನೂ ನಿಷೇಧಿಸಿ ಎಂದು ಹೇಳಿದ್ದಾರೆ.

Defending the game of jallikattu currently banned in Tamil Nadu, superstar Kamal Haasan today said he is a big fan and all those who hate the bull sport should give up on biryani too.

 

Loading...

Leave a Reply

Your email address will not be published.