ಐಐಟಿ, ಐಐಎಸ್ಸಿ ಪಿಹೆಚ್ಡಿ ವಿದ್ಯಾರ್ಥಿಗಳಿಗೆ ಇನ್ನು ಮಾಸಿಕ ರೂ. 70 ಸಾವಿರ ಶಿಷ್ಯವೇತನ

ಐಐಟಿ, ಐಐಎಸ್ಸಿ ಗಳಲ್ಲಿ ಪಿಹೆಚ್ಡಿ ಮಾಡುವ ಸಂಶೋಧಕರಿಗೆ 5 ವರ್ಷಗಳ ಕಾಲ ಮಾಸಿಕ ರೂ.70 ಸಾವಿರ ಶಿಷ್ಯವೇತನ ನೀಡುವುದಾಗಿ ಕೇಂದ್ರ ಉನ್ನತ ಶಿಕ್ಷಣ ಕಾರ್ಯದರ್ಶಿ ಕೇವಲ್ ಕುಮಾರ್ ಶರ್ಮಾ ಹೇಳಿದ್ದಾರೆ. ಸದ್ಯ ಐಐಟಿ ವಿದ್ಯಾರ್ಥಿಗಳು ಮಾಸಿಕ ರೂ.25 ಸಾವಿರ ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ.

ಮೋದಿ ಎಂದರೆ ಇಷ್ಟಾನೇ, ಆದರೆ ಅಮಿತ್ ಶಾ ಅಂದ್ರೆ ಕಷ್ಟ

ಆರ್ಥಿಕ ಕಾರಣಗಳಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳು ದೇಶ ಬಿಟ್ಟು ಹೊರಗೆ ಹೋಗದೆ ನಮ್ಮಲ್ಲಿಯೇ ಉಳಿಸಿಕೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಂಶೋಧನಾ ಶಿಷ್ಯವೇತನ ಯೋಜನೆ ಭಾಗವಾಗಿ ಈ ಹೆಜ್ಜೆಯಿಟ್ಟಿರುವುದಾಗಿ ಶರ್ಮಾ ಹೇಳಿದ್ದಾರೆ. ದೇಶದ ಐಐಟಿ ಮತ್ತು ಐಐಎಸ್ಸಿ ಗಳಲ್ಲಿ ಸುಮಾರು 2000 ಜನರಿಗೆ ಶಿಷ್ಯವೇತನಗಳನ್ನು ನೀಡುವುದಾಗಿ ಅವರು ಹೇಳಿದರು.

ಇದೀಗ ದೇಶದಲ್ಲಿ 23 ಐಐಟಿಗಳಿದ್ದು, ಬೆಂಗಳೂರಿನಲ್ಲಿ ಒಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಇದೆ.

ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳು ಸಂಶೋಧನಾ ಅವಧಿಯಲ್ಲಿ ಆರ್ಥಿಕ ಕಾರಣದಿಂದ ಬೇರೆ ಯಾವುದೇ ಉದ್ಯೋಗ ಮಾಡುವ ಅಗತ್ಯವಿರುವುದಿಲ್ಲ. ಈ ಪ್ರಸ್ತಾವನೆಗೆ ಶೀಘ್ರದಲ್ಲಿಯೇ ಸಂಪುಟದ ಅನುಮೋದನೆಯೂ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.