ಪಶ್ಚಿಮ ಬಂಗಾಳದಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾರ್ಖಾನೆ ಪತ್ತೆ – News Mirchi
ಸಾಂದರ್ಭಿಕ ಚಿತ್ರ

ಪಶ್ಚಿಮ ಬಂಗಾಳದಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾರ್ಖಾನೆ ಪತ್ತೆ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯನ್ನು ಪೊಲೀಸರು ಇಂದು ಪತ್ತೆ ಹಚ್ಚಿದ್ದಾರೆ. ಕಾರ್ಖಾನೆಯಿಂದ 9ಮಿಮೀ ಮತ್ತು 7ಮಿಮೀ ಸಾಮರ್ಥ್ಯದ ಬಳಸಲು ಸಿದ್ಧವಾಗಿದ್ದ 48 ಬಂದೂಕುಗಳು, ಇನ್ನೂ ತಯಾರಿಕೆ ಹಂತದ್ದಲಿದ್ದ ಬಂದೂಕುಗಳು ಮತ್ತು ಬಂದೂಕು ತಯಾರಿಕೆಯಲ್ಲಿ ಬಳಸುತ್ತಿದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕೆ ಕಾರ್ಖಾನೆಯನ್ನು ನಡೆಸುತ್ತಿದ್ದ 7 ಜನರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಲ್ಲಿ ಓರ್ವ ಮನೆಯ ಮಾಲೀಕ ಮತ್ತು 6 ಜನರು ಬಿಹಾರದಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಕೇಂದ್ರವೆಂದೇ ಕುಖ್ಯಾತವಾಗಿರುವ ಮುಂಗೇರ್ ಮೂಲದವರೆಂದು ತಿಳಿದುಬಂದಿದೆ.

ಪೊಲೀಸರ ದಾಳಿ ವೇಳೆ 50 ಸಾವಿರ ಮೌಲ್ಯದ ನಕಲಿ ಭಾರತೀಯ ಕರೆನ್ಸಿಯೂ ಪತ್ತೆಯಾಗಿದೆ. ಇಲ್ಲಿ ತಯಾರಾದ ಬಂದೂಕುಗಳನ್ನು ಅಕ್ಕಪಕ್ಕದ ರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.

Loading...