ಅಕ್ರಮ ಟೆಲಿಫೋನ್ ಎಕ್ಸ್ ಚೇಂಜ್ ಬಯಲು, ಪಾಕ್ ಕೈವಾಡ ಶಂಕೆ

ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಕಂಪ್ಯೂಟರ್ ವ್ಯವಸ್ಥೆ ಬಳಸಿ ಅಕ್ ಟೆಲಿಫೋನ್ ಎಕ್ಸ್ ಚೇಂಜ್ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ನಮ್ಮ ಸೇನೆಗೆ ಸಂಬಂಧಿಸಿದ ಬಹುಮುಖ್ಯ ಮಾಹಿತಿಯನ್ನು ತಿಳಿದುಕೊಳ್ಳಲು ಪಾಕಿಸ್ತಾನದ ನಿಗಾ ಸಂಸ್ಥೆಗಳು ಇವುಗಳ ಮೂಲಕ ಪ್ರಯತ್ನಿಸುತ್ತಿವೆ ಎಂಬ ಅನುಮಾನಗಳಿವೆ.

ಸಾಮಾನ್ಯ ಟೆಲಿಫೋನ್ ಬದಲಿಗೆ ಅಂತರ್ಜಾಲವನ್ನು ಬಳಸಿ “ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್ (ವಿವೊಐಪಿ)” ತಂತ್ರಜ್ಞಾನದ ಮೂಲಕ ಬಂಧಿತರು ಕರೆ ಮಾಡುತ್ತಿದ್ದುದಾಗಿ ಬಯಲಾಗಿದೆ. ಜಮ್ಮೂ ಕಾಶ್ಮೀರದಿಂದ ಸೇನಾ ಗುಪ್ತಚರ ಸಂಸ್ಥೆ ನೀಡಿದ ಮಾಹಿತಿಯನ್ನಾಧರಿಸಿ ಮಹಾರಾಷ್ಟ್ರ ಉಗ್ರ ನಿಗ್ರಹ ಪಡೆ, ಲಾತೂರು ಪೊಲೀಸರು, ದೂರಸಂಪರ್ಕ ಇಲಾಖೆ ಜಂಟಿಯಾಗಿ ಮೂರು ಕಡೆ ದಾಳಿ ನಡೆಸಿ ಅಕ್ರಮ ಬಯಲಿಗೆಳೆದಿದ್ದಾರೆ. ಈ ದೂರವಾಣಿ ವಿನಿಮಯ ಕೇಂದ್ರಗಳು ಕಳೆದ ಆರು ತಿಂಗಳಿಂದ ಕಾರ್ಯನಿರ್ವಹಿಸುತ್ತಿವೆ. ಇವುಗಳ ಮೂಲಕ ದೇಶಕ್ಕೆ ರೂ.15 ಕೋಟಿಗಳಷ್ಟು ಆದಾಯ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ವಿದೇಶಗಳಿಂದ ಅಂತರ್ಜಾಲದಲ್ಲಿ ಬರುವ ಕರೆಗಳನ್ನು ಭಾರತದಲ್ಲಿ ಬೇಕಾದವರಿಗೆ ಬದಲಾಯಿಸಲು ಒಂದು ಅಂತರಾಷ್ಟ್ರೀಯ ಗೇಟ್ ವೇ ಬಂಧಿತರು ಬಳಸುತ್ತಿದ್ದರು. ಇದು ಭಾರತೀಯ ದೂರವಾಣಿ ಕಾಯ್ದೆಗಳಿಗೆ ವಿರುದ್ಧವಾಗಿವೆ. ಬಂಧಿತರಿಂದ 96 ಸಿಮ್ ಕಾರ್ಡ್ ಗಳು, ಒಂದು ಕಂಪ್ಯೂಟರ್, ಕರೆ ಬದಲಿಸುವ ಉಪಕರಣವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache