ಬೇಕೆಂದೇ ಆತನನ್ನು ಟಾರ್ಗೆಟ್ ಮಾಡಿದೆವು : ಹಾರ್ಧಿಕ್ ಪಾಂಡ್ಯಾ – News Mirchi

ಬೇಕೆಂದೇ ಆತನನ್ನು ಟಾರ್ಗೆಟ್ ಮಾಡಿದೆವು : ಹಾರ್ಧಿಕ್ ಪಾಂಡ್ಯಾ

ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿದ ಹಾರ್ಧಿಕ್ ಪಾಂಡ್ಯಾ, ಮೊದಲ ಇನ್ನಿಂಗ್ಸ್ ನಲ್ಲಿ 66 ಎಸೆತಗಳಲ್ಲಿ 83 ರನ್ ಗಳಿಸಿದರು. ನಂತರ ಬೌಲಿಂಗ್ ನಲ್ಲೂ ಮಿಂಚಿದ ಪಾಂಡ್ಯಾ, ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ವಿಕೆಟ್ ಉರುಳಿಸಿದರು.

ಭಾರತ ಸುಲಭವಾಗಿ ಜಯಿಸಿದ ಈ ಪಂದ್ಯದಲ್ಲಿ ಪಾಂಡ್ಯಾ ಮ್ಯಾನ್ ಆಫ್ ದಿ ಮ್ಯಾಚ್ ಆದರು. ತಮ್ಮ ಪ್ರದರ್ಶನದ ಕುರಿತು ಪ್ರತಿಕ್ರಿಯಿಸಿದ ಪಾಂಡ್ಯಾ, ಕ್ಷೇತ್ರ ರಕ್ಷಣೆಯಲ್ಲೂ ಉತ್ತಮ ಪ್ರದರ್ಶನ ನೀಡಿ ಒಂದೆರಡು ಕ್ಯಾಚ್ ಹಿಡಿದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದರು. ‘ನನಗೆ ಇದು ಬಹಳ ಒಳ್ಳೆಯ ದಿನ. ತುಂಬಾ ಖುಷಿಯಾದ ದಿನ’ ಎಂದು ಪಂದ್ಯದದ ನಂತರ ಹೇಳಿದರು.

ನಾನು ಹಳೆಯ ಹಾರ್ಧಿಕ್ ಪಾಂಡ್ಯಾನೇ, ಇತ್ತೀಚೆಗೆ ತಾನೇನೂ ಹೆಚ್ಚು ಬದಲಾಗಿಲ್ಲ, ಆದರೆ ಜನ ಹಾಗೆ ಯೋಚಿಸುತ್ತಿರಬಹುದು. ಕಳೆದ ವರ್ಷಕ್ಕಿಂತ ಸ್ವಲ್ಪ ಶಾಂತನಾಗಿ ಬದಲಾಗಿರಬಹುದು ಎಂದು ಹೇಳಿದರು.

ಸ್ಪಿನ್ನರ್ ಆಡಮ್ ಜಂಪಾ ಬೌಲಿಂಗ್ ಗೆ ಬರುತ್ತಾರೆ ಎಂದು ಅವರನ್ನು ಮೊದಲೇ ನಾನು ಮತ್ತು ಧೋನಿ ಟಾರ್ಗೆಟ್ ಮಾಡಿದ್ದೆವು. ಅವರ ಓವರ್ ನಲ್ಲಿ ಸಾಧ್ಯವಾದಷ್ಟು ರನ್ ಕಸಿಯಬೇಕೆಂದು ಯೋಚಿಸಿದ್ದೆ. ನಮ್ಮ ಪ್ಲಾನ್ ಫಲಿಸಿದ್ದು ಸಹಕಾರಿಯಾಯಿತು ಎಂದು ಪಾಂಡ್ಯ ಹೇಳಿದ್ದಾರೆ. ಆಡಂ ಬೌಲಿಂಗ್ ನಲ್ಲಿ ಪಾಂಡ್ಯಾ ಸತತ ಮೂರು ಸಿಕ್ಸರ್ ಸಿಡಿಸಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ನನಗೆ ಸಂತೋಷವಾಗುತ್ತಿದೆ ಎಂದು ಅವರು ಹೇಳಿದರು.

[ಇದನ್ನೂ ಓದಿ: ಆ ಇಬ್ಬರೇ ನಾವು ಸೋಲಲು ಕಾರಣ]

ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾವನ್ನು 26 ರನ್ ಗಳಿಂದ ಸೋಲಿಸಿತು (ಡಕ್ವರ್ತ್ ಲೂಯಿಸ್ ಪ್ರಕಾರ). 50 ಓವರ್ ಗಳಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿತು. ಹಾರ್ಧಿಕ್ ಪಾಂಡ್ಯಾ (66 ಎಸೆತಗಳಲ್ಲಿ 83 ರನ್, 5 ಫೋರ್, 5 ಸಿಕ್ಸರ್) ಮತ್ತು ಎಂಎಸ್ ಧೋನಿ (88 ಎಸೆತಗಳಲ್ಲಿ 79 ರನ್, 4 ಬೌಂಡರಿಗಳು ಮತ್ತು 2 ಸಿಕ್ಸರ್) ಇನಿಂಗ್ಸ್ ನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರೀ ಮಳೆಯ ಕಾರಣ ಪಂದ್ಯವನ್ನು ದೀರ್ಘಕಾಲ ನಿಲ್ಲಿಸಲಾಯಿತು. ಮಳೆ ನಿಂತ ನಂತರ ಗೆಲ್ಲಲು ಆಸ್ಟ್ರೇಲಿಯಾಗೆ 21 ಓವರ್ ಗಳಲ್ಲಿ 164 ರನ್ ಗುರಿ ನೀಡಲಾಯಿತು. ಆಸ್ಟ್ರೇಲಿಯಾ 21 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಮ್ಯಾಕ್ಸ್ ವೆಲ್ (18 ಎಸೆತಗಳಲ್ಲಿ 39 ರನ್, 3 ಬೌಂಡರಿ ಮತ್ತು 4 ಸಿಕ್ಸರ್) ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್ ಗಳಿಸದ ಆಟಗಾರ , ಚಹಾಲ್ 3 ವಿಕೆಟ್ ಗಳನ್ನು ಪಡೆದರು. ಕೊಲ್ಕತ್ತಾದಲ್ಲಿ ಗುರುವಾರ ಎರಡನೇ ಏಕದಿನ ಪಂದ್ಯ ನಡೆಯಲಿದೆ.

Get Latest updates on WhatsApp. Send ‘Add Me’ to 8550851559

Click for More Interesting News

Loading...
error: Content is protected !!