‘ಯೂ ಟರ್ನ್’ ಹೊಡೆದ ಲಾಲೂ, ನೋಟು ರದ್ದು ನಿರ್ಧಾರಕ್ಕೆ ವಿರೋಧವಿಲ್ಲ

ಪಾಟ್ನಾ: ನೋಟು ರದ್ದು ವಿಷಯದಲ್ಲಿ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿದ್ದ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್, ಎಡಪಕ್ಷಗಳಿಗೆ, ಪ್ರತಿಪಕ್ಷಗಳಿಗೆ ಶಾಕ್ ನೀಡಿದ್ದಾರೆ.

ಮೊನ್ನೆಯವರೆಗೂ ನೋಟು ರದ್ದು ನಿರ್ಧಾರವನ್ನು ತೀವ್ರ ವಿರೋಧಿಸುತ್ತಿದ್ದ ಲಾಲೂ ಯು ಟರ್ನ್ ಹೊಡೆದು ಈಗ ಬೆಂಬಲ ವ್ಯಕ್ತಪಡಿಸಿದ್ದಾರೆ‌. ತಾವು ಕೇಂದ್ರ ತೀರ್ಮಾನವನ್ನು ವಿರೋಧಿಸುತ್ತಿಲ್ಲ, ಅದರೆ ಅದನ್ನು ಜಾರಿ ಮಾಡುತ್ತಿರುವ ಕ್ರಮ ಮಾತ್ರ ಸರಿಯಲ್ಲ ಎಂದು ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಹೀಗೆ ಹೇಳುವ ಮೂಲಕ ಇತರ ಪಕ್ಷಗಳು, ಮಾಧ್ಯಮಗಳು ಅವಾಕ್ಕಾಗುವಂತೆ ಮಾಡಿದ್ದಾರೆ. ಈಗಾಗಲೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕೇಂದ್ರದ ತೀರ್ಮಾನಕ್ಕೆ ಬಹಿರಂಗವಾಗಿ ಬೆಂಬಲ ನೀಡಿದ್ದು, ಮಿತ್ರ ಪಕ್ಷದ ನಾಯಕ ಲಾಲೂ ಮಾತ್ರ ವಿರೋಧ ವ್ಯಕ್ತಪಡಿಸಿದ್ದರು.

ಈ ಬೆಳವಣಿಗೆಗಳಿಂದ ನಿತೀಶ್ ಕುಮಾರ್ ಎನ್‌ಡಿಎ ಮೈತ್ರಿಕೂಟಕ್ಕೆ ಹತ್ತಿರವಾಗುತ್ತಿದ್ದಾರೆ, ನಿತೀಶ್ – ಲಾಲೂ ಮೈತ್ರಿ ಮುರಿದು ಬೀಳಲಿದೆ ಎಂದೇ ಎಲ್ಲಾ ಭಾವಿಸುತ್ತಿದ್ದರು. ಆದರೆ ಅಷ್ಟರೊಳಗೆ ಲಾಲೂ ನಿತೀಶ್ ದಾರಿಗೆ ಬಂದಿದ್ದಾರೆ. ಮಂಗಳವಾರ ಲಾಲೂ ಮನೆಗೆ ನಿತೀಶ್ ಹೋಗಿದ್ದರು. ಈ ಸಂದರ್ಭದಲ್ಲಿ ಅವರು ಕೆಲ ಕಾಲ ಮಾತುಕತೆ ನಡೆಸಿದರು. ಅನಂತರ ಪಕ್ಷದ ಶಾಸಕರ ಸಭೆಯಲ್ಲಿ (ನಿತೀಶ್ ಕೂಡಾ ಪಾಲ್ಗೊಂಡಿದ್ದರು) ಮಾತನಾಡಿದ ಲಾಲೂ, ನೋಟು ರದ್ದು ನಿರ್ಧಾರಕ್ಕೆ ತನ್ನ ವಿರೋಧವಿಲ್ಲ, ಅದನ್ನು ಜಾರಿ ಮಾಡುವ ರೀತಿಯ ಬಗ್ಗೆ ಅಸಮಾಧಾನವಿದೆ ಎಂದರು.

loading...
error: Content is protected !!