ಉರುಳಿಬಿದ್ದ ಮದ್ಯ ತುಂಬಿದ ಟ್ರಕ್, ಹಬ್ಬ ಮಾಡಿಕೊಂಡ ಕುಡುಕ ಪ್ರಿಯರು

ದೆಹಲಿ: ಹರಿಯಾಣದ ಝಜ್ಜರ್ ನಿಂದ ಬರುತ್ತಿದ್ದ ತುಂಬಿದ ಮಿನಿ ಟ್ರಕ್ ಒಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೋರಲು ಬಿದ್ದಿದೆ. ಟ್ರಕ್‌ನಲ್ಲಿದ್ದ ಮದ್ಯದ ಬಾಟಲ್ ಗಳನ್ನು ರಕ್ಷಿಸಿಕೊಳ್ಳಬೇಕಿದ್ದ ಟ್ರಕ್ ಚಾಲಕ ಮಾತ್ರ ಅಲ್ಲಿಂದ ಪರಾರಿಯಾಗಿದ್ದಾನೆ. ಇನ್ನು ಸಿಕ್ಕಿದ್ದೇ ಚಾನ್ಸ್ ಎಂದು ಉರುಳಿಬಿದ್ದ ಟ್ರಕ್ ಒಳಗಿನ ಮದ್ಯವನ್ನು ಕುಡುಕ ಪ್ರಿಯರು ತಮಗೆ ಸಿಕ್ಕಷ್ಟು ಬಾಟಲ್ ಗಳನ್ನು ಚೀಲಗಳಲ್ಲಿ ತುಂಬಿಸಿಕೊಂಡು ಮನೆ ದಾರಿ ಹಿಡಿದರು. ಪಾಪ ಕೆಲವರಂತೂ ಬಾಟೆಲ್ ಒಡೆದು ಚೆಲ್ಲಿದ್ದ ಮದ್ಯವನ್ನು ಕಂಡು ಬೆಸರ ವ್ಯಕ್ತಪಡಿಸಿದರಂತೆ.

ಹರಿಯಾಣದಲ್ಲಿ ಮಾರಬೇಕಿದ್ದ ಮದ್ಯವನ್ನು ದೆಹಲಿಗೆ ಅಕ್ರಮವಾಗಿ ಸಾಗಿಸುತ್ತಿದ್ದರಿಂದಲೇ ಚಾಲಕ‌ ಸ್ಥಳದಿಂದ ಪರಾರಿಯಾಗಲು ಕಾರಣವಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Related News

loading...
error: Content is protected !!