ಭಾರತದ ಪ್ರತಿ ದಾಳಿಗೆ ಇಬ್ಬರು ಪಾಕ್ ಸೈನಿಕರ ಸಾವು, ಒಂದು ಬಂಕರ್ ಧ್ವಂಸ

ಜಮ್ಮೂ ಕಾಶ್ಮೀರ ಗಡಿಯಲ್ಲಿನ ನಿಯಂತ್ರಣ ರೇಖೆ ಬಳಿ ಗುಂಡಿನ ಚಕಮಕಿ ಮುಂದುವರೆಯುತ್ತಿದೆ. ಶನಿವಾರ ಬೆಳಗ್ಗೆಯಿಂದ ಪಾಕಿಸ್ತಾನ ಪಡೆಗಳು ನಡೆಸುತ್ತಿರುವ ಅಪ್ರಚೋದಿತ ದಾಳಿಗೆ ದಿಟ್ಟ ಉತ್ತರ ನೀಡುತ್ತಿರುವ ಭಾರತೀಯ ಯೋಧರು, ಪಾಕಿಸ್ತಾನದ ಪೋಸ್ಟ್ ಗಳನ್ನು ಗುರಿಯಾಗಿಸಿ ಶನಿವಾರ ರಾತ್ರಿ, ಭಾನುವಾರ ಪ್ರತಿ ದಾಳಿ ನಡೆಸಿದ್ದಾರೆ. ಭಾರತೀಯ ಯೋಧರ ಗುಂಡಿನ ದಾಳಿಯಲ್ಲಿ ಪಾಕಿಸ್ತಾನದ ಇಬ್ಬರು ಸೈನಿಕರು ಹತರಾಗಿದ್ದರೆ, ಐದು ಜನ ನಾಗರಿಕರು ಸಾವನ್ನಪ್ಪಿದ್ದಾರೆ. ಸುಮಾರು 16 ಜನ ಗಾಯಗೊಂಡಿರಬಹುದು ಎನ್ನಲಾಗುತ್ತಿದೆ.

ಪಾಕಿಸ್ತಾನದ ಪೂಂಛ್ ಜಿಲ್ಲೆಯ ಹಜೀರಾ ಸೆಕ್ಟಾರ್ ನ ಗಡಿಯ ಗ್ರಾಮಗಳಲ್ಲಿ ಈ ಸಾವುಗಳು ಸಂಭವಿಸಿವೆ. ಟೆಟ್ರಿನೋಟ್ ಸೆಕ್ಟಾರ್ ನ ಬಹೈರ್, ಅಬ್ಬಾಸ್ ಪುರದ ಸತ್ವಾಲ್, ದಕ್ಕೀ ಚಾಫರ್, ಚತ್ರೀ ಯಲ್ಲಿನ ಪೊಲಾಸ್ ಪ್ರಾಂತ್ಯಗಳಲ್ಲಿ ಪಾಕಿಸ್ತಾನಕ್ಕೆ ನಷ್ಟವಾಗಿದೆ ಎಂದು ಭಾರತೀಯ ಸೇನೆಯ ಮೂಲಗಳು ಅನಧಿಕೃತವಾಗಿ ಹೇಳಿವೆ. ಗುಂಡಿನ ದಾಳಿಯಲ್ಲಿ ಏಳು ಜನರು ಪಾಕಿಸ್ತಾನಿ ಸೈನಿಕರು ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಈಗಲೋ ಆಗಲೋ ಎಂಬಂತಿದೆ ಎನ್ನಲಾಗಿದೆ. ಭಾರತದ ಚಕ್ಕಾ ದ ಬಾಗ್, ಖಾರೀ ಕಮಾರಾ ಸೆಕ್ಟಾರ್ ಗಳಿಗೆ ಆಚೆ ಪಾಕಿಸ್ತಾನ್ “24 ಫ್ರಾಂಟಿಯನ್ ಫೋರ್ಸ್” ಯೂನಿಟ್ ನ ಸೈನಿಕರಿವರು ಎಂದು ಗುರುತಿಸಲಾಗಿದೆ. ಭಾರತದ ಪ್ರತಿ ದಾಳಿಯಲ್ಲಿ ಪಾಕಿಸ್ತಾನದ ಆರ್ಮಿ ಪೋಸ್ಟ್ ಸಂಪೂರ್ಣ ಧ್ವಂಸವಾಗಿದೆ.

ಸೇನೆಯಲ್ಲಿ ಈಗಿರುವ ರೈಫಲ್ ಬದಲಿಸಲು ಕೇಂದ್ರದ ನಿರ್ಧಾರ

ಅದಕ್ಕೂ ಮುನ್ನ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದ್ದರಿಂದ, ಭಾರತದ ಯೋಧ ಮಹಮ್ಮದ್ ಶೌಕತ್ ಮತ್ತು ಆತನ ಪತ್ನಿ ಸಾವನ್ನಪ್ಪಿದ್ದರು. ಪೂಂಛ್ ಜಿಲ್ಲೆಯಲ್ಲಿನ ಅವರ ಮನೆಯ ಮೇಲೆ 120 ಎಂ.ಎಂ. ಮೊರ್ಟಾರ್ ಶೆಲ್ ಬಿದ್ದಿದ್ದು ಇಬ್ಬರೂ ಸಾವನ್ನಪ್ಪಿದ್ದರು. ಘಟನೆಯಲ್ಲಿ ಅವರ ಇಬ್ಬರು ಪುತ್ರಿಯರು ಮತ್ತೊಬ್ಬರು ಗಾಯಗೊಂಡಿದ್ದರು.

ಆ ಚಿತ್ರಕ್ಕೆ ಕಥೆ ಬರೆದಿದ್ದು ‘ಯೋಗಿ’ಯಂತೆ