ಕಂಬಳ ಬೆಂಬಲಿಸಿ ರಾಜ್ಯ ಬಂದ್‌ಗೆ ವಾಟಾಳ್ ಕರೆ – News Mirchi

ಕಂಬಳ ಬೆಂಬಲಿಸಿ ರಾಜ್ಯ ಬಂದ್‌ಗೆ ವಾಟಾಳ್ ಕರೆ

ತಮಿಳುನಾಡಿನ ಜಲ್ಲಿಕಟ್ಟು ಪರ ಹೋರಾಟದ ಪರಿಣಾಮ, ರಾಜ್ಯದಲ್ಲಿ ಕಂಬಳ ಆಚರಣೆಯ ನಿಷೇಧವನ್ನು ತೆರವುಗೊಳಿಸುವಂತೆ ಒತ್ತಾಯಗಳು ಇದೀಗ ಹೆಚ್ಚಾಗುತ್ತಿವೆ. ಕಂಬಳ ಕ್ರೀಡೆಯ ಮೇಲಿನ ನಿಷೇಧ ತೆರವುಗೊಳಿಸಲು ಜನರಿಂದ ಬೆಂಬಲ ಕೋರಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಫೆಬ್ರವರಿ‌ 18 ರಂದು ರಾಜ್ಯ ಬಂದ್ ಗೆ ಕರೆ ನೀಡಿದ್ದಾರೆ.

ಜಲ್ಲಿಕಟ್ಟು ಆಚರಣೆಗಾಗಿ ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆಯನ್ನು ತರಲು ಕೇಂದ್ರ ಸರ್ಕಾರ ಅನುಮತಿ ನೀಡುವುದು ಸಾಧ್ಯವಾದರೆ ಕಂಬಳಕ್ಕೇಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ. ಜನವರಿ 28 ರಂದು ಕಂಬಳ ಬೆಂಬಲಿಸುವವರು ಸೇರಿದಂತೆ ಚಿತ್ರರಂಗದ ಪ್ರಮುಖರು ಮೂಡಬಿದರೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಚಿಂತನೆ ನಡೆಸಿದ್ದಾರೆ.

ಕಳೆದ ನವೆಂಬರ್ 8 ರಂದು ಕರ್ನಾಟಕ ಹೈಕೋರ್ಟ್ ಕಂಬಳ ಆಚರಣೆಗೆ ತಡೆ ನೀಡಿತ್ತು. ಕಂಬಳ ನಿಷೇಧಿಸುವಂತೆ ಪ್ರಾಣಿ ದಯಾ ಸಂಘಟನೆ “ಪೆಟಾ” ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಇನ್ನೂ ಬಾಕಿ ಇದ್ದು ಜನವರಿ 30 ರಂದು ವಿಚಾರಣೆಗೆ ಬರಲಿದೆ.

Following in Tamil Nadu’s footsteps, protests are taking root in Karnataka for lifting the ban on kambala. The leader of Kannada Chalavali Vatal Paksha, Vatal Nagaraj has called for Karnataka bandh on 18 th of february.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!