ರಾಮಮಂದಿರ ಬೇಕು ಎನ್ನುತ್ತಿರುವ ಮುಸ್ಲಿಮರು: ಬರುತ್ತಿವೆ ಬೆದರಿಕೆ ಕರೆ |News Mirchi

ರಾಮಮಂದಿರ ಬೇಕು ಎನ್ನುತ್ತಿರುವ ಮುಸ್ಲಿಮರು: ಬರುತ್ತಿವೆ ಬೆದರಿಕೆ ಕರೆ

ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುಕೂಲವಾಗಿ ಉತ್ತರಪ್ರದೇಶದ ಲಕ್ನೋದಲ್ಲಿ ಕೆಲ ಮುಸ್ಲಿಂ ಸಂಘಟನೆಗಳು ಬ್ಯಾನರ್ ಗಳನ್ನು ಹಾಕಿದ್ದು ಬ್ಯಾನರ್ ಹಾಕಿದವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ರಾಮ ಮಂದಿರ ನಿರ್ಮಾಣವಾಗಬೇಕೆಂದು ಮನವಿ ಮಾಡುತ್ತಾ ಕೆಲವು ಮುಸ್ಲಿಂ ಸಂಘಟನೆಗಳು ದೊಡ್ಡ ದೊಡ್ಡ ಹೋರ್ಡಿಂಗ್ ಗಳನ್ನು ಹಾಕಿವೆ. ರಾಮ ಮಂದಿರ ನಿರ್ಮಾಣ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳುವಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಸೂಚಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ.

ಅಜಂಖಾನ್ ಎಂಬ ವ್ಯಕ್ತಿಯ ನೇತೃತ್ವದಲ್ಲಿ ಶ್ರೀರಾಮ ಮಂದಿರ ಕರಸೇವಕ್ ಮಂಚ್ ಎಂಬ ಸಂಘಟನೆ ಈ ಬ್ಯಾನರ್ ಗಳನ್ನು ಹಾಕಿದೆ. ರಾಮಮಂದಿರ ನಿರ್ಮಾಣ ಪರ ಬ್ಯಾನರ್ ಹಾಕಿದ್ದಕ್ಕೆ ತನಗೆ ಬೆದರಿಕೆಗಳು ಬರುತ್ತಿವೆ ಎಂದು ಅಜಂಖಾನ್ ಹೇಳಿದ್ದಾರೆ. ಇಮೇಲ್, ಫೋನ್ ಮೂಲಕ ಬೆದರಿಕೆಗಳು ಬಂದಿವೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದು, ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ.

Loading...
loading...
error: Content is protected !!