ಪ್ರಧಾನಿ ‘ಮನ್ ಕೀ ಬಾತ್’ ನಿಂದ ಆಕಾಶವಾಣಿಗೆ ಲಾಭವೆಷ್ಟು ಗೊತ್ತೇ?

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರೇಡಿಯೋ ಭಾಷಣ ಕಾರ್ಯಕ್ರಮವಾದ ‘ಮನ್ ಕೀ ಬಾತ್’ ಮೂಲಕ ಲಕ್ಷಾಂತರ ಹೊಸ ಕೇಳುಗರನ್ನು ಹೊಂದಿರುವ ‘ಆಲ್ ಇಂಡಿಯಾ ರೇಡಿಯೋ'(ಎಐಆರ್) ಗೆ ಪ್ರತಿ ವರ್ಷ ಭಾರೀ ಆದಾಯವೂ ಬರುತ್ತಿದೆ

2015-16 ರಲ್ಲಿ ಈ ಕಾರ್ಯಕ್ರಮದ ಮೂಲಕ ಪ್ರಸಾರ ಮಾಡಿದ ಜಾಹೀರಾತುಗಳಿಂದ ಬಂದ ಆದಾಯವೇ ರೂ. 4.78 ಕೋಟಿ ಎಂದು ಕೇಂದ್ರ ಹೇಳಿದೆ.

ಇದು ಕೇವಲ ರೇಡಿಯೋ ಪ್ರಸಾರದ ಆದಾಯವಾಗಿದ್ದು, ಇದೇ ಕಾರ್ಯಕ್ರಮ ಪ್ರಸಾರವಾಗುವ ಇತರೆ ಲೈವ್ ಸ್ಟ್ರೀಮಿಂಗ್, ಆಪ್ ಗಳ ಸೇವೆಗಳಿಂದ ಬರುವ ಆದಾಯ ಇದರಲ್ಲಿ ಸೇರಿಸಿಲ್ಲ ಎಂದು ಹೇಳಿದೆ.