ನೀವಾಗಿಯೇ ಕಪ್ಪು ಹಣ ಘೋಷಿಸಿದರೆ 50-50, ಇಲ್ಲವೆಂದರೆ…

ನೋಟು ರದ್ದುಗೊಳಿಸಿ ಕಪ್ಪು ಹಣಕ್ಕೆ ಬ್ರೇಕ್ ಹಾಕುವ ಐತಿಹಾಸಿಕ ತೀರ್ಮಾನ ಕೈಗೊಂಡಿರುವ ಕೇಂದ್ರ ಸರ್ಕಾರ ಈಗ ಬ್ಯಾಂಕುಗಳಿಗೆ ಹರಿದು ಬರುತ್ತಿರುವ ಡಿಪಾಸಿಟ್ ಗಳ ಮೇಲೆ ಕಣ್ಣು ಹಾಯಿಸಿದೆ. ನೋಟು ರದ್ದು ತೀರ್ಮಾನದ ನಂತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿರುವ ಲೆಕ್ಕವಿಲ್ಲದ ಹಣದಲ್ಲಿ ಹೊರಗೆ ತರಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಾಳ ಧನಿಕರಿಗೆ ಘೋಷಿಸಿಕೊಳ್ಳಲು ಮತ್ತೊಂದು ಅವಕಾಶ ನೀಡಿದೆ.

(ಐಟಿ) ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಸೋಮವಾರ ಆರ್ಥಿಕ ಸಚಿವ ಸಂಸತ್ತಿನಲ್ಲಿ ಮಸೂದೆ ಮಂಡಿಸಿದರು. ಇದರ ಪ್ರಕಾರ ದೊಡ್ಡ ನೋಟು ರದ್ದಾದ ನಂತರ ಬ್ಯಾಂಕು ಖಾತೆಗಳ ಡಿಪಾಸಿಟ್‌ಗಳಲ್ಲಿ ಆದಾಯ ವಿವರಗಳನ್ನು ಬಹಿರಂಗಪಡಿಸದ ಮೊತ್ತವನ್ನು ಡಿಸೆಂಬರ್ 30 ರೊಳಗೆ ಸ್ವಯಂಪ್ರೇರಿತವಾಗಿ ಘೋಷಿಸಿದರೆ, ಅದರ ಮೇಲೆ ಶೇ. 50 ರಷ್ಟು (ದಂಡ, ಸರ್‌ಚಾರ್ಜ್ ಸೇರಿ) ಪಾವತಿಸಿ ಸೇಫ್ ಆಗಬಹುದು ಎಂದು ಹೇಳಿದೆ.

ಇದರ ಜೊತೆಗೆ ಈ ಲೆಕ್ಕವಿಲ್ಲದ ಆದಾಯದಲ್ಲಿ ಶೇ. 25 ರಷ್ಟು ಸರ್ಕಾರದ ಬಳಿ ಡಿಪಾಸಿಟ್ ಮಾಡಬೇಕಾಗುತ್ತದೆ. ಇದನ್ನು ನಾಲ್ಕು ವರ್ಷಗಳ ಕಾಲ ಹಿಂಪಡೆಯಲು ಸಾಧ್ಯವಿಲ್ಲ(ಲಾಕಿನ್). ಉಳಿದ ಶೇ. 25 ರಷ್ಟನ್ನು ಹಿಂದೆ ಪಡೆಯಬಹುದು. ತಾವಾಗಿಯೇ ಘೋಷಿಸದೆ, ಐಟಿ ಅಧಿಕಾರಿಗಳೇ ಪತ್ತೆ ಹಚ್ಚಿದರೆ, ಅಂತಹ ಹಣದ ಮೇಲೆ ಶೇ.85 ರಷ್ಟು (ದಂಡ, ಸರ್‌ಚಾರ್ಜ್ ಸೇರಿಸಿ) ಪಾವತಿ ಮಾಡಬೇಕಿರುತ್ತದೆ.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache