ನಾಲ್ವರ ಮೇಲಿನ ದಾಳಿಯಲ್ಲಿ ಪತ್ತೆಯಾಗಿದ್ದು 152 ಕೋಟಿ ಮೌಲ್ಯದ ಆಸ್ತಿ

ಬೆಂಗಳೂರು: ಮೂರು ದಿನಗಳಿಂದ ಬೆಂಗಳೂರಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸುಮಾರು ರೂ.152 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಕಾವೇರಿ ನೀರಾವರಿ ನಿಗಮದ ನಿರ್ದೇಶಕ ಚಿಕ್ಕರಾಯಪ್ಪ, ಲೋಕೋಪಯೋಗಿ ಇಲಾಖೆಯ ಜಯಚಂದ್ರ, ಮತ್ತಿಬ್ಬರು ಗುತ್ತಿಗೆದಾರರ ನಿವಾಸಗಳು, ಕಛೇರಿ, ಅವರ ಸ್ನೇಹಿತರ ಮನೆಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ. ಪತ್ತೆಯಾದ ಹಣದಲ್ಲಿ ರೂ. 5.7 ಕೋಟಿ ಮೌಲ್ಯದ ಹೊಸ ರೂ.2 ಸಾವಿರ ಮುಖ ಬೆಲೆಯ ನೋಟುಗಳಿವೆ.

ದಾಳಿಯ ವೇಳೆ ಸುಮಾರು 7 ಕೆಜಿ ಚಿನ್ನ, ಬೆಳ್ಳಿಯ ಬಿಸ್ಕತ್ತುಗಳು, 9 ಕೆಜಿ ಆಭರಣಗಳು ಪತ್ತೆಯಾಗಿವೆ. ನೂರಾರು ಕೋಟಿ ಮೌಲ್ಯದ ಆಸ್ತಿ, ದುಬಾರಿ ಕಾರುಗಳು ಕಂಡುಬಂದಿವೆ. ದಾಳಿಗೊಳಗಾದ ಸರ್ಕಾರಿ ಇಂಜಿನಿಯರುಗಳಾದ ಚಿಕ್ಕರಾಯಪ್ಪ ಮತ್ತು ಜಯಚಂದ್ರ ರವರನ್ನು ಅಮಾನತು ಮಾಡುತ್ತಿರುವುದಾಗಿ ಗೃಹ ಸಚಿವ ಪರಮೇಶ್ವರ್ ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ. ಮತ್ತಿಬ್ಬರು ಗುತ್ತಿಗೆದಾರರ ವಿರುದ್ಧ ಕೇಸು ದಾಖಲಿಸಿದ್ದಾರೆ.

Loading...

Leave a Reply

Your email address will not be published.

error: Content is protected !!