ಆದಾಯ ತೆರಿಗೆ ಪಾವತಿ ಗಡುವು ವಿಸ್ತರಣೆ – News Mirchi

ಆದಾಯ ತೆರಿಗೆ ಪಾವತಿ ಗಡುವು ವಿಸ್ತರಣೆ

ಆದಾಯ ತೆರಿಗೆ ಇಲಾಖೆ 2016-17 ರ ಸಾಲಿನ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್(ಐಟಿಆರ್) ಫೈಲಿಂಗ್ ನ ಗಡುವನ್ನು ವಿಸ್ತರಿಸಿದೆ. ತೆರಿಗೆ ಪಾವತಿದಾರರಿಗೆ ಆಗಸ್ಟ್ 5 ರವರೆಗೆ ಫೈಲಿಂಗ್ ಗೆ ಅವಕಾಶ ನೀಡಿದೆ. ಹಾಗೆಯೇ ಇವರಿಗೆ ಆಧಾರ್ ಕಾರ್ಡ್ ಪಾನ್ ಕಾರ್ಡ್ ನೊಂದಿಗೆ ಜೋಡಣೆ ಮಾಡಲು ಮತ್ತಷ್ಟು ಸಮಯಾವಕಾಶ ನೀಡಿದೆ.

ಆಗಸ್ಟ್ 31 ರೊಳಗೆ ಆಧಾರ್ ಜೋಡಣೆಯನ್ನು ಕಡ್ಡಾಯವಾಗಿ ಮಾಡಬೇಕೆಂದು ಪ್ರಕಟಣೆ ಹೇಳಿದೆ. ತೆರಿಗೆ ಪಾವತಿದಾರರು ಐಟಿಆರ್ ಫೈಲಿಂಗ್ ಗೆ ಅವರ ಆಧಾರ್ ಕಾರ್ಡ್, ಪಾನ್ ಕಾರ್ಡ್ ಅನ್ನು ಜೋಡಣೆ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ಈ ಜುಲೈ 1 ರಿಂದ ಇದನ್ನು ಕಡ್ಡಾಯಗೊಳಿಸಿದೆ.

ಈ ಹಿಂದೆ ಹೇಳಿದಂತೆ ಸೋಮವಾರ ಐಟಿಆರ್ ಫೈಲಿಂಗ್ ಕೊನೆಯ ದಿನವಾಗಿತ್ತು. ಹೀಗಾಗಿ ಕೊನೆಯ ದಿನ ಇಫೈಲಿಂಗ್ ಗಾಗಿ ಜನ ಮುಗಿಬಿದ್ದರು. ಹಲವರಿಗೆ ಇ-ಫೈಲಿಂಗ್ ವೆಬ್ಸೈಟ್ ಗೆ ಲಾಗಿನ್ ಆಗಲು ಸಾಧ್ಯವಾಗಿರಲಿಲ್ಲ. ಈ ಕುರಿತು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಗಡುವನ್ನು ಇನ್ನಷ್ಟು ವಿಸ್ತರಿಸಿದ್ದೇವೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಪ್ರಕಟಣೆ ನೀಡಿದೆ.

ಚೀನಾ ನಾಯಕತ್ವವೇ ಬೆಸ್ಟ್ ಎಂದ ಅರುಣ್ ಶೌರಿ

ಐಟಿಆರ್ ಫೈಲಿಂಗ್ ಗೆ ಆಧಾರ್ ಕಡ್ಡಾಯವಾಗಿದ್ದರಿಂದಲೂ ಸ್ವಲ್ಪ ಸಮಸ್ಯೆಯಾಗಿದೆ ಎಂದು ಸಿಬಿಡಿಟಿ ಹೇಳಿದೆ. ಕೆಲವೊಮ್ಮೆ ಆಧಾರ್ ಮತ್ತು ಪಾನ್ ಕಾರ್ಡ್ ಗಳಲ್ಲಿನ ಮಾಹಿತಿ ಹೊಂದಾಣಿಕೆಯಾಗುವುದಿಲ್ಲ, ಇಂತಹ ಸಂದರ್ಭಗಳಲ್ಲಿ ಆಧಾರ್ ಮತ್ತು ಪಾನ್ ಜೋಡಣೆ ಕಷ್ಟವಾಗುತ್ತದೆ. ಹೀಗಾಗಿ ಸದ್ಯ ಇ-ಫೈಲಿಂಗ್ ಮಾಡಲು ಆಧಾರ್ ಸಂಖ್ಯೆ ಅಥವಾ ಆಧಾರ್ ಗೆ ಅರ್ಜಿ ಸಲ್ಲಿಸಿದ ಸ್ವೀಕೃತಿ ಸಂಖ್ಯೆಯನ್ನು ನೀಡಬಹುದು.

ಬಡತನದ ಕಾರಣಕ್ಕೆ ಅತ್ಯಾಚಾರ ನಡೆಸಿದವನನ್ನೇ ಮದುವೆಯಾದ ಅಪ್ರಾಪ್ತ ಬಾಲಕಿ

Contact for any Electrical Works across Bengaluru

Loading...
error: Content is protected !!