ಕೊಹ್ಲಿಗೆ ಅಪರೂಪದ ದಾಖಲೆ ಜಸ್ಟ್ ಮಿಸ್

ಭಾರತ, ಇಂಗ್ಲೆಂಡ್ ತಂಡಗಳ ನಡುವೆ ನಡೆದ 2 ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ನಾಯಕ ವಿರಾಟ್ ಕೊಹ್ಲಿ 167 ರನ್ ಗಳಿಸಿದರು. ಈ ಪಂದ್ಯದಲ್ಲೇನಾದರೂ ಕೊಹ್ಲಿ ದ್ವಿಶತಕ ಸಿಡಿಸಿದ್ದರೆ ಅಪರೂಪದ ದಾಖಲೆಗೆ ಪಾತ್ರರಾಗುತ್ತಿದ್ದರು. ಒಂದೇ ವರ್ಷದಲ್ಲಿ ಮೂರು ದ್ವಿಶತಕ ಭಾರಿಸಿದ ಏಕೈಕ ಭಾರತೀಯನಾಗಿ ನಿಲ್ಲುತ್ತಿದ್ದರು.

ವ್ಯಾಸ ರಚಿತ ಮಹಾಭಾರತ

ಈ ವರ್ಷದಲ್ಲಿ ಕೊಹ್ಲಿ ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ವಿರುದ್ಧ ದ್ವಿಶತಕ ದಾಖಲಿಸಿದ್ದರು. ಇಂಗ್ಲೆಂಡ್ ವಿರುದ್ಧವೂ ದ್ವಿಶತಕ ಗಳಿಸಿದ್ದರೆ ಒಂದೇ ವರ್ಷದಲ್ಲಿ ಮೂರನೆಯ ದ್ವಿಶತಕ ಆಗುತ್ತಿತ್ತು. ಇದುವರೆಗೂ ಯಾವ ಭಾರತೀಯ ಆಟಗಾರನೂ ಒಂದೇ ವರ್ಷದಲ್ಲಿ ಮೂರು ದ್ವಿಶತಕ ಗಳಿಸಿಲ್ಲ.

ವಿನೋದ್ ಕಾಂಬ್ಲಿ, ಸಚಿನ್, ದ್ರಾವಿಡ್, ಸೆಹ್ವಾಗ್ ಒಂದು ವರ್ಷದಲ್ಲಿ ಎರಡು ದ್ವಿಶತಕ ಸಿಡಿಸಿದ್ದರು. ಆದರೆ ಕೇವಲ ಅಸ್ಟ್ರೆಲಿಯಾದ ಕೆಲವು ಆಟಗಾರರು ಮಾತ್ರ ಒಂದು ವರ್ಷದಲ್ಲಿ ಮೂರು ದ್ವಿಶತಕ ಸಿಡಿಸಿದವರಿದ್ದಾರೆ. ಭಾರತ ಇಂಗ್ಲೆಂಡ್ ವಿರುದ್ಧ ಇನ್ನೂ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ದ್ವಿಶತಕ ಗಳಿಸುತ್ತಾರಾ… ನೋಡಬೇಕು.

Related Post

error: Content is protected !!