ಸಾಲದ ಪ್ರಮಾಣ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚು – News Mirchi

ಸಾಲದ ಪ್ರಮಾಣ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚು

ನವದೆಹಲಿ: ಭಾರತದಲ್ಲಿ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲೇ ಸಾಲಗಳ ಪ್ರಮಾಣ ಹೆಚ್ಚು ಎಂದು ಒಂದು ವರದಿಯೊಂದು ಹೇಳುತ್ತಿದೆ. ಸಾಲದ ವ್ಯಾಪ್ತಿಯು ಗ್ರಾಮೀಣ ಪ್ರದೇಶದಲ್ಲಿ ಶೇ.31.4 ರವರೆಗೆ ಇದ್ದು, ನಗರಗಳಲ್ಲಿ ಇದರ ಪ್ರಮಾಣ ಶೇ.22.4 ಇದೆ ಎಂದು ವರದಿ ಹೇಳಿದೆ.

2013(ಜನವರಿ- ಡಿಸೆಂಬರ್) ರಲ್ಲಿ ನಡೆಸಿದ ರಾಷ್ಟ್ರೀಯ ಮಾದರಿ ಸಮೀಕ್ಷೆ ಆಧಾರದ ಮೇಲೆ ನಡೆಸಿದ ಅಧ್ಯಯನದಲ್ಲಿ 4,529 ಗ್ರಾಮಗಳು, 3,507 ನಗರ ಪ್ರದೇಶಗಳಲ್ಲಿ 1,10,800 ಕುಟುಂಬಗಳನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ. ಸಾಲದ ಸರಾಸರಿ ಮೊತ್ತ ಗ್ರಾಮೀಣ ಭಾಗಗಳಲ್ಲಿ ರೂ. 1,03,457 ಇದ್ದರೆ, ನಗರ ಪ್ರದೇಶದಲ್ಲಿ ಸರಸಾರಿ ರೂ. 3,68,238 ಎಂದು ಹೇಳಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಶೇ.56 ರಷ್ಟು ಸಾಲಗಳನ್ನು ಹಣಕಾಸು ಸಂಸ್ಥೆಗಳು ನೀಡುತ್ತಿದ್ದರೆ, ಶೇ. 44 ರಷ್ಟು ಸಾಲಗಳನ್ನು ಇತರೆ ವರ್ಗಗಳು ನೀಡುತ್ತಿದ್ದು ಬಡ್ಡಿ ವ್ಯಾಪಾರಿಗಳು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇದೇ ನಗರಗಳಲ್ಲಿ ಕ್ರಮವಾಗಿ ಶೆ. 85, 15 ರಷ್ಟಿದೆ.

Loading...

Leave a Reply

Your email address will not be published.