ಚೀನಾ ಆಕ್ಷೇಪಕ್ಕೆ ಭಾರತದ ಖಡಕ್ ಉತ್ತರ

ಚೀನಾಗೆ ಭಾರತ ನಿರೀಕ್ಷಿಸದಂತಹ ಶಾಕ್ ನಿಡಿದೆ. ಅರುಣಾಚಲಪ್ರದೇಶದಲ್ಲಿ ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರವಾಸದ ಕುರಿತು ಚೀನಾ ವ್ಯಕ್ತಪಡಿಸಿದ ಆಕ್ಷೇಪಕ್ಕೆ ಖಡಕ್ ಉತ್ತರವನ್ನು ಭಾರತ ನೀಡಿದೆ. ಅರುಣಾಚಲ ಪ್ರದೇಶ ಸಂಪೂರ್ಣವಾಗಿ ಭಾರತದ ಭಾಗವಾಗಿದೆ. ಭಾರತ ದೇಶದ ಪ್ರಜೆಗಳು, ನಾಯಕರು, ಅಧಿಕಾರಿಗಳು ಹೀಗೆ ಯಾರೇ ಆಗಲಿ ಅರುಣಾಚಲ ಪ್ರದೇಶದಲ್ಲಿ ಪ್ರವಾಸ ಮಾಡುವ ಸ್ವಾತಂತ್ರ್ಯವಿದೆ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ನಮ್ಮ ದೇಶದ ಭಾಗವಾದ ಒಂದು ರಾಜ್ಯದಲ್ಲಿ ಪ್ರವಾಸ ಮಾಡುವ ಸ್ವಾತಂತ್ರ್ಯ, ಹಕ್ಕು ಕೇಂದ್ರ ಸಚಿವರಿಗೆ ಇದೆ ಎಂದು ವಿದೇಶಾಂಗ ಇಲಾಖೆ ಅಧಿಕೃತ ವಕ್ತಾರ ರವೀಶ್ ಕುಮಾರ್ ಚೀನಾಗೆ ಉತ್ತರಿಸಿದ್ದಾರೆ.

ಅರುಣಾಚಲ ಪ್ರದೇಶದ ವಿಷಯದಲ್ಲಿ ಚೀನಾ ಭವಿಷ್ಯತ್ತಿನಲ್ಲಿ ಯಾವುದೇ ರೀತಿಯ ಆಕ್ಷೇಪಗಳನ್ನು ಎತ್ತಿದರೂ ಪರಿಣಾಮ ಗಂಭೀರವಾಗಿರುತ್ತದೆ ಎಂದು ರವೀಶ್ ಎಚ್ಚರಿಸಿದ್ದಾರೆ. ಅರುಣಾಚಲ ಪ್ರದೇಶ ದಕ್ಷಿಣ ಟಿಬೆಟ್ ನ ಭಾಗವಾಗಿದೆ ಎಂದು ಚೀನಾ ಹೇಳಿಕೆಯನ್ನು ಅವರು ಖಂಡಿಸಿದರು. ಚೀನಾ ನಿರ್ಮಿಸುತ್ತಿರುವ ಒನ್ ಬೆಲ್ಟ್ ಒನ್ ರೋಡ್ ವಿಷಯದಲ್ಲಿ ಭಾರತಕ್ಕೆ ಸಪಷ್ಟವಾದ, ನಿರ್ದಿಷ್ಟವಾದ ತೀರ್ಮಾನಗಳಿವೆ ಎಂದು ರವೀಶ್ ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559