ಮೂರನೇ ಬಾರಿಗೆ ಏಷ್ಯಾ ಕಪ್ ಗೆದ್ದ ಭಾರತ – News Mirchi

ಮೂರನೇ ಬಾರಿಗೆ ಏಷ್ಯಾ ಕಪ್ ಗೆದ್ದ ಭಾರತ

ಭಾರತ ಹಾಕಿ ತಂಡವು ಭಾನುವಾರ ಢಾಕಾದಲ್ಲಿ ಮಲೇಷ್ಯಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 2-1 ಗೋಲುಗಳಿಂದ ಜಯ ಸಾಧಿಸಿ ಏಷ್ಯಾಕಪ್ ತನ್ನದಾಗಿಸಿಕೊಂಡಿದೆ. ಟೂರ್ನಿಯಲ್ಲಿ ಗ್ರೂಪ್ ಹಂತದಿಂದಲೂ ಭಾರತ ತಂಡ ಒಂದೂ ಪಂದ್ಯವನ್ನು ಸೋಲದೆ ಕಪ್ ಸಾಧಿಸಿದ್ದು ವಿಶೇಷವಾಗಿದೆ.

ಪಂದ್ಯದ ಮೊದಲಾರ್ಧದಲ್ಲಿ, ರಮಣ್ ದೀಪ್ ಸಿಂಗ್ ಗೋಲು ಭಾರಿಸುವುದರೊಂದಿಗೆ ಭಾರತ ಖಾತೆಯನ್ನು ತೆರೆಯಿತು. ನಂತರ 29 ನೇ ನಿಮಿಷದಲ್ಲಿ ಲಲಿತ್ ಉಪಾಧ್ಯಾಯ್ ಮತ್ತೊಂದು ಗೋಲು ಗಳಿಸಿದರು. ಮೈದಾನದಲ್ಲಿ ಮಿಂಚಿನಂತೆ ಓಡಾಡುತ್ತಿದ್ದ ಭಾರತೀಯ ಆಟಗಾರರಿಂದ ಚೆಂಡನ್ನು ಕಸಿಯಲು ಮಲೇಷ್ಯಾ ಸ್ಟ್ರೈಕರ್ ಗಳು ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾದವು. ಮಲೇಷ್ಯಾ ಆಟಗಾರ ಶಹ್ರೀಲ್ ಸಾಬಾ 50 ನೇ ನಿಮಿದಲ್ಲಿ ಬಾಂಗ್ಲಾ ಪರ ಮೊದಲ ಗೋಲು ಗಳಿಸಿದರು. ನಂತರ ಗೋಲು ಗಳಿಸಲು ಮಲೇಷ್ಯಾ ಆಟಗಾರರು ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾದವು. ಹೀಗಾಗಿ ಭಾರತ ಮೂರನೇ ಭಾರಿಗೆ ಏಷ್ಯಾ ಕಪ್ ವಿಜೇತರಾದರು. [ಇದನ್ನೂ ಓದಿ: ಅಮೆರಿಕದಿಂದ ಭಾರತಕ್ಕೆ ಶಸ್ತ್ರಾಸ್ತ್ರ ಸಾಮರ್ಥ್ಯದ ಡ್ರೋನ್ ಗಳು]

ಲಲಿತ್ ಉಪಾಧ್ಯಾಯ್ ಅವರು ಗೋಲ್ ಆಫ್ ದ ಮ್ಯಾಚ್ ಅವಾರ್ಡ್ ಪಡೆದರೆ, ಆಕಾಶ್ ದೀಪ್ ಸಿಂಗ್ ಅವರು ಪಂದ್ಯ ಪುರಷೋತ್ತಮರಾದರು. ಭಾರತವು ಏಷ್ಯಾ ಕಪ್ ನಲ್ಲಿ 7 ಬಾರಿ ಫೈನಲ್ ತಲುಪಿದ್ದು, ಮೂರು ಬಾರಿ ಕಪ್ಪ ಗೆದ್ದಿದೆ.

Get Latest updates on WhatsApp. Send ‘Add Me’ to 8550851559

Loading...