6 ನ್ಯೂಕ್ಲಿಯರ್ ಜಲಾಂತರ್ಗಾಮಿ ನಿರ್ಮಾಣಕ್ಕೆ ಮುಂದಾದ ಭಾರತ

ಜಾಗತಿಕ ಮಟ್ಟದಲ್ಲಿ ಚೀನಾವನ್ನು ಇಕ್ಕಟ್ಟಿಗೆ ದೂಡಿರುವ ಭಾರತ, ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಡೊಕ್ಲಾಂ ವಿವಾದದ ನಂತರ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿರುವ ಭಾರತ, ಇಲ್ಲಿಯವರೆ ನ್ಯೂಕ್ಲಿಯರ್ ಸಬ್ ಮರೀನ್ ಗಳ ಮೇಲೆ ಹೆಚ್ಚು ಗಮನ ಹರಿಸಿರಲಿಲ್ಲ. ಚೀನಾದ ಆಕ್ರಮಣಕಾರಿ ವರ್ತನೆಗೆ ಕಡಿವಾಣ ಹಾಕಲು ಭಾರತವು ಇದೀಗ ಏಕಕಾಲದಲ್ಲಿ 6 ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು ಆರಂಭಿಸಿದೆ. ಇದು ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ನೌಕಾಪಡೆಯ ಹೋರಾಟದ ಸಾಮರ್ಥ್ಯವನ್ನು ಹೆಚ್ಚಳಕ್ಕೆ ಕಾರಣವಾಗುತ್ತದೆ.

2013 ರಿಂದಲೂ ಹಿಂದೂ ಮಹಾಸಾಗರದಲ್ಲಿ ಚೀನಾದ ಜಲಾಂತರ್ಗಾಮಿಗಳು ನಿರಂತರವಾಗಿ ಕಂಡುಬರುತ್ತಿವೆ. ಕಡಲ್ಗಳ್ಳತನವನ್ನು ನಿಯಂತ್ರಿಸುವ ಕಾರ್ಯಚರಣೆಗಳಿಗೆ ಜಲಾಂರ್ಗಾಮಿಗಳನ್ನು ನಿಯೋಜಿಸುತ್ತಿರುವುದಾಗಿ ಚೀನಾ ಹೇಳುತ್ತಾ ಬರುತ್ತಿದೆ. ಆದರೆ ಕಡಲ್ಗಳ್ಳತನ ನಿಯಂತ್ರಣ ಮಾಡಲು ಜಲಾಂತರ್ಗಾಮಿಗಳು ಸೂಕ್ತವಲ್ಲ ಎಂದು ಭಾರತೀಯ ನೌಕಾ ಪಡೆಯ ದಿನದ ಅಂಗವಾಗಿ ಮಾತನಾಡುತ್ತಾ ನೌಕಾಪಡೆಯ ಮುಖ್ಯ ಅಡ್ಮಿರಲ್ ಸುನಿಲ್ ಲಾಂಬಾ ಹೇಳಿದ್ದಾರೆ.

ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ಭಾರತ, ಆಸ್ಟ್ರೇಲಿಯ, ಜಪಾನ್ ಮತ್ತು ಅಮೆರಿಕಾ ಮೈತ್ರಿಕೂಟದಲ್ಲಿ ಭಾರತದ ನೌಕಾಪಡೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಲಾಂಬಾ ಹೇಳಿದ್ದಾರೆ..

Get Latest updates on WhatsApp. Send ‘Add Me’ to 8550851559

Related News