ಚೀನಾ ಗಡಿಯಲ್ಲಿ ಭಾರತದ ಆಕ್ರಮಣಕಾರಿ ನಡೆ |News Mirchi

ಚೀನಾ ಗಡಿಯಲ್ಲಿ ಭಾರತದ ಆಕ್ರಮಣಕಾರಿ ನಡೆ

ಸಿಕ್ಕಿಂ ಗಡಿಯಲ್ಲಿ ಕಳೆದ ಕೆಲ ದಿನಗಳಿಂದ ಚೀನಾ ಮತ್ತು ಸೇನಾಪಡೆಗಳ ನಡುವೆ ಉದ್ವಿಘ್ನ ಪರಿಸ್ಥಿತಿ ನೆಲೆಸಿರುವ ಹಿನ್ನೆಲೆಯಲ್ಲಿ “ಯುದ್ದಕ್ಕೆ ಸಿದ್ಧತೆ ಅಲ್ಲದ” ವಿಧಾನದಲ್ಲಿಯೇ ಭಾರತೀಯ ಸೇನೆ ಹೆಚ್ಚಿನ ತುಕಡಿಗಳನ್ನು ಅಲ್ಲಿಗೆ ಕಳುಹಿದೆ. ಆದರೆ 1962 ರ ನಂತರ ಇಷ್ಟು ದೊಡ್ಡ ಮೊತ್ತದಲ್ಲಿ ಭಾರತೀಯ ಸೇನೆಯನ್ನು ಚೀನಾ ಗಡಿಯಲ್ಲಿ ನಿಯೋಜಿಸಿರುವುದು ಇದೇ ಮೊದಲು.

ಗನ್ ಕೊಳವೆಗಳನ್ನು ಕೆಳಮುಖವಾಗಿಡುವ ಮೂಲಕ ನಮ್ಮ ಟ್ಯಾಂಕುಗಳು ಯುದ್ಧ ಸಿದ್ಧತೆಯೊಂದಿಗೆ ಬರುತ್ತಿಲ್ಲವೆಂಬ ಸಂದೇಶವನ್ನು ಕಳುಹಿಸಿದ್ದಾರೆ. ಇತ್ತೀಚೆಗೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) 2 ಭಾರತೀಯ ಬಂಕರ್ ಗಳನ್ನು ಧ್ವಂಸಗೊಳಿಸಿದ್ದರಿಂದ, ಭಾರತ ಈ ಕ್ರಮಕ್ಕೆ ಮುಂದಾಗಿದೆ. ಈ ಘಟನೆಯ ನಂತರ ಹಲವು ಬಾರಿ ಪಿಎಲ್ಎ ಪಡೆಗಳು ಮತ್ತು ಭಾರತೀಯ ಸೇನೆ ನಡುವೆ ಘರ್ಷಣೆಯ ವಾತಾವರಣ ಕಾಣಿಸಿಕೊಂಡಿತ್ತು. 1962 ರಲ್ಲಿ ಚೀನಾದೊಂದಿಗೆ ನಡೆದ ಯುದ್ಧದ ನಂತರ, ಭಾರತೀಯ ಪಡೆಗಳು ಇದ್ದ ಪ್ರದೇಶವನ್ನು ಇಂಡೋ ಟಿಬೆಟ್ ಹಡಿ ಪೊಲೀಸ್ ಪಡೆಯ ರಕ್ಷಣೆಯಲ್ಲಿಡಲಾಗಿದೆ.

ಇತ್ತೀಚೆಗೆ ಉದ್ವಿಘ್ನ ಪರಿಸ್ಥಿತಿಗಳು ಉದ್ಭವಿಸಿದ ನಂತರ, ಭಾರತೀಯ ಸೇನೆಯ ಮೇಜರ್ ಜನರಲ್ ರ್ಯಾಂಕ್ ಅಧಿಕಾರಿಯನ್ನು ಅಲ್ಲಿಗೆ ಕಳುಹಿಸಿ, ಚೀನಾ ಅಧಿಕಾರಿಗಳೊಂದಿಗೆ ಫ್ಲ್ಯಾಗ್ ಮೀಟಿಂಗ್ ನಡೆಸಿತ್ತು. ಎರಡು ಬಾರಿ ಬರದ ಚೀನಾ ಸೇನಾಧಿಕಾರಿಗಳು ಮೂರನೇ ಬಾರಿ ಫ್ಲ್ಯಾಗ್ ಮೀಟಿಂಗ್ ಗೆ ಬಂದಿದ್ದರು. ಡೋಕಾ ಲಾ ಪ್ರದೇಶದಲ್ಲಿ ಲಾಲ್ಟೆನ್ ನಿಂದ ಭಾರತೀಯ ಸೇನೆ ಹೊರಟುಹೋಗಬೇಕು ಎಂದು ಚೀನಾ ಈ ಸಮಯದಲ್ಲಿ ಕೋರಿತು. ಇದರೊಂದಿಗೆ ಭಾರತೀಯರ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ತಡೆದು, ಎರಡನೇ ತಂಡದ ವೀಸಾಗಳನ್ನು ರದ್ದುಗೊಳಿಸುತ್ತಿರುವುದಾಗಿ ಹೇಳಿದರು.

ಟಿಬೆಟ್ ದಕ್ಷಿಣ ಪ್ರದೇಶದಲ್ಲಿನ ಚುಂಬಿ ಕಣಿವೆ ಮೇಲೆ ಅಧಿಪತ್ಯ ಸ್ಥಾಪಿಸಬೇಕೆಂಬುದು ಚೀನಾ ಗುರಿ. ಹಾಗೆಯೇ ಡೋಕಾ ಲಾ ಪ್ರಾಂತ್ಯದ ಮೇಲೆ ತನ್ನ ಹಿಡಿತ ಸಾಧಿಸುವ ಮೂಲಕ ಭಾರತ-ಭೂತಾನ್ ಗಡಿಗಳನ್ನು ಪರಿಶೀಲಿಸಲು ಚೀನಾ ಪ್ರಯತ್ನಿಸುತ್ತಿದೆ. ಮತ್ತೊಂದು ಕಡೆ ಸಿಕ್ಕಿಂ ಪ್ರದೇಶದಲ್ಲಿ ಭಾರತದ ಪಡೆಗಳೇ ನಿಯಮಗಳನ್ನು ಉಲ್ಲಂಘಿಸಿದಂತೆ ಬಿಂಬಿಸಲು ಚೀನಾ ಪ್ರಯತ್ನಿಸುತ್ತಿದೆ. ಭಾರತೀಯ ಪಡೆಗಳೇ ತಮ್ಮ ಭೂಪ್ರದೇಶಕ್ಕೆ ನುಗ್ಗಿವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ಕಾಂಗ್ ಇತ್ತೀಚೆಗೆ ಆರೋಪಿಸಿದ್ದರು. ಅದರ ಜೊತೆಗೆ ಡೋಕಾಲಾ ತಮ್ಮ ಭೂಪ್ರದೇಶಕ್ಕೆ ಸೇರಿದ್ದು ಎಂದು ತೋರಿಸಿಕೊಳ್ಳಲು ಒಂದು ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದೆ.

ಚೀನಾದ ಪಿಎಲ್ಎ ಪಡೆಗಳು ರಸ್ತೆ ನಿರ್ಮಾಣಕ್ಕೆ ಪ್ರಯತ್ನಿಸುತ್ತಿರುವ ಪ್ರದೇಶ ನಮ್ಮದಾಗಿದ್ದು, ಭಾರತೀಯ ಪಡೆಗಳೂ ಇದಕ್ಕೆ ಅಡ್ಡಿಪಡಿಸುತ್ತಿವೆ ಎಂದು ಚೀನಾ ಆರೋಪಿಸುತ್ತಿದೆ. ಆದರೆ 1988, 98 ಒಪ್ಪಂದಗಳ ಪ್ರಕಾರ ಆ ಪ್ರದೇಶ ನಮಗೆ ಸೇರಿದ್ದು ಎಂದು ಭೂತಾನ್ ವಾದಿಸುತ್ತಿದೆ. ಚೀನಾದೊಂದಿಗೆ ನಮಗೆ ಒಟ್ಟು 3,488 ಕಿ.ಮೀ ಗಡಿಯಿದೆ. ಅದರಲ್ಲಿ 220 ಕಿ.ಮೀ ಸಿಕ್ಕಿಂ ವ್ಯಾಪ್ತಿಯಲ್ಲಿದೆ. ಸದ್ಯದ ಉದ್ವಿಘ್ನ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಈ ತಿಂಗಳು 8 ರಿಂದ 15 ರವರೆಗೆ ಟಿಬೆಟ್ ನಲ್ಲಿ ನಡೆಯಬೇಕಿದ್ದ ಭಾರತೀಯ ಪತ್ರಕರ್ತರ ಪ್ರವಾಸವನ್ನು ಚೀನಾ ರದ್ದುಗೊಳಿಸಿದೆ.

Loading...
loading...
error: Content is protected !!