ಡೊಕ್ಲಾಂ ವಿವಾದದ ನಂತರ ಮೊದಲ ಬಾರಿಗೆ ಭಾರತ – ಚೀನಾ ಗಡಿಯಲ್ಲಿ ಚರ್ಚೆ – News Mirchi

ಡೊಕ್ಲಾಂ ವಿವಾದದ ನಂತರ ಮೊದಲ ಬಾರಿಗೆ ಭಾರತ – ಚೀನಾ ಗಡಿಯಲ್ಲಿ ಚರ್ಚೆ

ಇತ್ತೀಚೆಗೆ 2 ತಿಂಗಳಿಗೂ ಹೆಚ್ಚು ಕಾಲ ಭಾರತ ಮತ್ತು ಚೀನಾಗಳ ನಡುವೆ ಉದ್ಭವಿಸಿದ್ದ ವಿವಾದದ ನಂತರ, ಇದೇ ಮೊದಲ ಬಾರಿಗೆ ಉಭಯ ದೇಶಗಳು ಗಡಿಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿವೆ. ಭಾರತ ಮತ್ತು ಚೀನಾ ಗಡಿ ವ್ಯವಹಾರಗಳ ಕುರಿತು ಕನ್ಸಲ್ಟೇಷನ್, ಕೋ ಆರ್ಡಿನೇಷನ್ ವರ್ಕಿಂಗ್ ಮೆಕ್ಯಾನಿಸಂ 10ನೇ ಸುತ್ತಿನ ಸಭೆ ಶುಕ್ರವಾರ ಸಂಜೆ ನಡೆಯಿತು. ಈ ಚರ್ಚೆ ಕುರಿತು ಬೀಜಿಂಗ್ ನಲ್ಲಿ ಭಾರತೀಯ ರಾಯಭಾರಿ ಕಛೇರಿ ಅಧಿಕೃತವಾಗಿ ಪ್ರಕಟಿಸಿದೆ.

ವಿದೇಶಾಂಗ ಇಲಾಖೆಯ ಜಂಟಿ ಕಾರ್ಯದರ್ಶಿ(ಈಸ್ಟ್ ಏಷ್ಯಾ) ಪ್ರಣಯ್ ವರ್, ಏಷ್ಯಾ ಅಫೈರ್ಸ್ ಡಿಪಾರ್ಟ್ ಮೆಂಟ್ ಡೈರೆಕ್ಟರ್ ಜನರಲ್ ಜಿಯಾವೋ ಖಿಯಾನ್ ನೇತೃತ್ವದಲ್ಲಿ ಈ ಚರ್ಚೆ ಸಾಗಿತ್ತು. ಉಭಯ ದೇಶಗಳ ಪ್ರತಿನಿಧಿಗಳು ಈ ಚರ್ಚೆಯಲ್ಲಿ ಪಾಲ್ಗೊಂಡು ನಿಯಂತ್ರಣ ರೇಖೆಯ ಬಳಿಯ ಭದ್ರತಾ ಪರಿಸ್ಥಿತಿ, ಎರಡೂ ದೇಶಗಳ ಸೇನಾ ಚಟುವಟಿಕೆಗಳ ಸಮೀಕ್ಷೆ ನಡೆಸಿದರು. ಡೊಕ್ಲಾಂ ವಿವಾದದ ನಂತರ ಭಾರತ-ಚೀನಾ ನಡುವೆ ಗಡಿ ಚರ್ಚೆ ನಡೆದದ್ದು ಇದೇ ಮೊದಲು.

ಭಾರತ ಮತ್ತು ಚೀನಾ ನಡುವೆ ಜೂನ್ ನಲ್ಲಿ ಡೊಕ್ಲಾಂ ವಿವಾದ ಉದ್ಭವಿಸಿತ್ತು. ಗಡಿಯನ್ನು ದಾಟಿ ಚೀನಾ ನಡೆಸುತ್ತಿದ್ದ ರಸ್ತೆ ನಿರ್ಮಾಣ ಕಾಮಗಾರಿಗೆ ಭಾರತೀಯ ಪಡೆಗಳು ಅಡ್ಡಿಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವೆ ಉದ್ವಿಘ್ನತೆ ಸೃಷ್ಟಿಯಾಗಿತ್ತು. ಭಾರತೀಯ ಪಡೆಗಳು ಹಿಂದೆ ಸರಿಯದಿದ್ದರೆ ಚೀನಾ ಹಲವು ಬಾರಿ ಎಚ್ಚರಿಸಿತ್ತು. ಮತ್ತೊಂದು ಕಡೆ ರಾಜತಾಂತ್ರಿಕ ಚರ್ಚೆಗಳಿಂದಲೇ ಸಮಸ್ಯೆ ಪರಿಹಾರ ಸಾಧ್ಯ ಎಂದು ಭಾರತ ನಿರಂತರವಾಗಿ ಹೇಳುತ್ತಾ ಬಂದಿತ್ತು. ಕೊನೆಗೂ ಎರಡೂವರೆ ತಿಂಗಳ ನಂತರ ಆಗಸ್ಟ್ ಕೊನೆ ವಾರದಲ್ಲಿ ಈ ವಿವಾದದ ಸದ್ದಡಗಿತ್ತು.

Get Latest updates on WhatsApp. Send ‘Add Me’ to 8550851559

Loading...