ಚೀನಾವನ್ನು ಎದುರಿಸಲು ಆಕಾಶ್ ಕ್ಷಿಪಣಿಗಳನ್ನು ನಿಲ್ಲಿಸಲು ನಿರ್ಧರಿಸಲಾಗಿತ್ತು... ಆದರೆ ಆಗಿದ್ದೇನು? |News Mirchi

ಚೀನಾವನ್ನು ಎದುರಿಸಲು ಆಕಾಶ್ ಕ್ಷಿಪಣಿಗಳನ್ನು ನಿಲ್ಲಿಸಲು ನಿರ್ಧರಿಸಲಾಗಿತ್ತು… ಆದರೆ ಆಗಿದ್ದೇನು?

ಚೀನಾದಿಂದ ಮುಂದೊಂದು ದಿನ ಆಪತ್ತು ಎದುರಾಗಬಹುದು ಎಂಬ ಉದ್ದೇಶದಿಂದ ಈಶಾನ್ಯ ರಾಜ್ಯಗಳಲ್ಲಿ ಸ್ವದೇಶೀ ನಿರ್ಮಿತ ಆಕಾಶ್ ಕ್ಷಿಪಣಿಗಳನ್ನು ನಿಯೋಜಿಸಬೇಕು ಎಂದು ಭಾರತ ಸರ್ಕಾರ ಈ ಹಿಂದೆಯೇ ಚಿಂತನೆ ನಡೆಸಿತ್ತಂತೆ. ಇದನ್ನು ಕಾಗ್ ವರದಿ ಬಹಿರಂಗಪಡಿಸಿದೆ. ಇದಕ್ಕಾಗಿ 2010 ರಲ್ಲಿ ಸಚಿವ ಸಂಪುಟ ಅನುಮೋದನೆಯನ್ನೂ ಪಡೆಯಲಾಗಿತ್ತು. ಆದರೆ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನವಾಗಿಲ್ಲ ಎಂಬುದಕ್ಕೆ ವರದಿಯಾಗಿರುವ ಕಾರಣಗಳು ಮಾತ್ರ ಗಂಭೀರವಾಗಿವೆ.

ಆಕಾಶ್ ಕ್ಷಿಪಣಿಗಳ ತಯಾರಿಕೆಯಲ್ಲಿರುವ ಲೋಪಗಳ ಬಗ್ಗೆ ಕಾಗ್ ಶುಕ್ರವಾರ ಸಂಸತ್ತಿನಲ್ಲಿ ವರದಿಯನ್ನು ಮಂಡಿಸಿತು. ಇದೇ ವೇಳೆ ಆನ್ಲೈನ್ ನಲ್ಲೂ ಈ ವಿವರಗಳನ್ನು ಜನರಿಗೆ ತಿಳಿಯುವಂತೆ ಪ್ರಕಟಿಸಿದೆ. ಆಕಾಶ್ ಕ್ಷಿಪಣಿಗಳನ್ನು ಡಿ.ಆರ್.ಡಿ.ಒ ವಿನ್ಯಾಸಗೊಳಿಸಿತ್ತು. ಸರ್ಕಾರಿ ಸಂಸ್ಥೆಗಳಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) ಮುಂತಾದವು ಇವುಗಳನ್ನು ನಿರ್ಮಾಣ ಮಾಡಿದ್ದವು.

ಸ್ವದೇಶಿ ತಂತ್ರಜ್ಞಾನದೊಂದಿಗೆ ತಯಾರಾದ ಆಕಾಶ್ ಕ್ಷಿಪಣಿಗಳಲ್ಲಿ ಮೂರನೇ ಒಂದರಷ್ಟು ಭಾಗ ಪರೀಕ್ಷೆ ಸಮಯದಲ್ಲಿಯೇ ವಿಫಲವಾಗಿವೆಯಂತೆ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ಆಕಾಶ್ ಕ್ಷಿಪಣಿಗಳು ನೆರವಿಗೆ ಬರುತ್ತವೆಯೇ? ಎಂಬ ಪ್ರಶ್ನೆ ಉದ್ಭವವಾಗಿತ್ತು ಎಂದು ಕಾಗ್ ಹೇಳಿದೆ. 2013 ಜೂನ್ ನಿಂದ 2015 ಡಿಸೆಂಬರ್ ನಡುವೆ ಈಶಾನ್ಯ ರಾಜ್ಯಗಳಲ್ಲಿ ಆರು ಪ್ರದೇಶಗಳಲ್ಲಿ ಚೀನಾ ಕಡೆ ಆಕಾಶ್ ಕ್ಷಿಪಣಿಗಳ ಸ್ಕ್ವಾಡ್ರನ್ ಗಳನ್ನು ನಿಲ್ಲಿಸಬೇಕಾಗಿತ್ತು ಎಂದು ವರದಿ ಹೇಳಿದೆ. ಇದಕ್ಕಾಗಿ ಸರ್ಕಾರ ರೂ.3,619 ಕೋಟಿ ಮೀಸಲಿಟ್ಟಿತ್ತು ಎನ್ನಲಾಗಿದೆ.

ಸುಷ್ಮಾಜೀ ನೀವು ನಮ್ ದೇಶದ ಪ್ರಧಾನಿಯಾಗಬೇಕಿತ್ತು ಎಂದ ಪಾಕ್ ಮಹಿಳೆ

ಆದರೆ, ಇಲ್ಲಿಯವರೆಗೂ ಒಂದೇ ಒಂದು ಸ್ಕ್ವಾಡ್ರನ್ ಕೂಡಾ ಸ್ಥಾಪನೆಯಾಗಿಲ್ಲ ಎಂದು ವರದಿಯಲ್ಲಿದೆ. ಬೇಸ್ ಗಳ ನಿರ್ಮಾಣದಲ್ಲಿ ವಿಳಂಬವೇ ಇದಕ್ಕೆ ಕಾರಣವೆಂದಿದೆ. ಭಾರತ ಮತ್ತು ಚೀನಾ ನಡುವಿನ ಉದ್ವಿಘ್ನ ವಾತಾವರಣದಲ್ಲಿ ಆಕಾಶ್ ಕ್ಷಿಪಣಿಗಳ ಬೇಸ್ ಗಳು ಈಶಾನ್ಯ ರಾಜ್ಯಗಳಲ್ಲಿ ಇದ್ದರೆ ಚೀನಾ ಸ್ವಲ್ಪ ಹಿಂಜರಿಯುತ್ತಿತ್ತು ಎಂದು ಹಿರಿಯ ಮಿಲಿಟರಿ ಅಧಿಕಾರಿಗಳು ಹೇಳುತ್ತಿದ್ದಾರೆ.

ಆಗ ಭಾರತದ ಮೇಲೆ ಅಣುಬಾಂಬ್ ದಾಳಿಗೆ ಪಾಕ್ ಹೆದರಿದ್ದೇಕೆ?

Loading...
loading...
error: Content is protected !!