ಆಸ್ಟ್ರೇಲಿಯಾದಲ್ಲಿ ಗಣೇಶನ ಕುರಿತು ವಿವಾದಿತ ಜಾಹೀರಾತು, ಭಾರತ ಕಿಡಿ – News Mirchi

ಆಸ್ಟ್ರೇಲಿಯಾದಲ್ಲಿ ಗಣೇಶನ ಕುರಿತು ವಿವಾದಿತ ಜಾಹೀರಾತು, ಭಾರತ ಕಿಡಿ

ಆಸ್ಟ್ರೇಲಿಯಾದಲ್ಲಿ ಜಾಹೀರಾತೊಂದರಲ್ಲಿ ಹಿಂದೂ ದೇವರು ಗಣೇಶ ಮಾಂಸ ತಿನ್ನುತ್ತಿರುವಂತೆ ಚಿತ್ರಿಸಿರುವುದಕ್ಕೆ ಸಂಬಂಧಿಸಿದಂತೆ ಭಾರತವು ರಾಜತಾಂತ್ರಿಕ ಪ್ರತಿಭಟನೆ ದಾಖಲಿಸಿದೆ. ಕ್ಯಾನ್ಬೆರಾದಲ್ಲಿನ ಭಾರತೀಯ ಹೈಕಮೀಷನ್ ಶುಕ್ರವಾರ ಮೂರು ಆಸ್ಟ್ರೇಲಿಯಾ ಸರ್ಕಾರಿ ಇಲಾಖೆಗಳಿಗೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ.

ಜಾಹೀರಾತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಚಿತ್ರಿಸಿರುವುದರಿಂದ ಆ ಜಾಹೀರಾತನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ಜಾಹೀರಾತು ಪ್ರಕಟಿಸಿರುವ ಮೀಟ್ ಲೈವ್ ಸ್ಟಾಕ್ ಕಂಪನಿಯನ್ನು ಭಾರತೀಯ ಹೈಕಮೀಷನ್ ಆಗ್ರಹಿಸಿದೆ.

“ದಿ ಮೀಟ್ ವಿ ಕ್ಯಾನ್ ಆಲ್ ಈಟ್” ಹೆಸರಿನ ಜಾಹೀರಾತಿನಲ್ಲಿ ಕೆಲವು ಧರ್ಮದ ದೇವತೆಗಳು, ವ್ಯಕ್ತಿಗಳನ್ನು ತೋರಿಸಿದ್ದು, ಕುರಿಮರಿಯ ಮಾಂಸ ಸೇವಿಸುತ್ತಿರುವಂತೆ ಚಿತ್ರಿಸಲಾಗಿತ್ತು. ಆಸ್ಟ್ರೇಲಿಯಾ ಸರ್ಕಾರ ಮತ್ತು ಮೀಟ್ ಅಂಡ್ ಲೈವ್ ಸ್ಟಾಕ್ ಕಂಪನಿಯ ವಿರುದ್ಧ ಹಲವು ಸಮುದಾಯಗಳು ಈಗಾಗಲೇ ಪ್ರತಿಭಟನೆ ವ್ಯಕ್ತಪಡಿಸಿವೆ ಎಂದು ಭಾರತೀಯ ಹೈಕಮೀಷನ್ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ 30 ದೂರುಗಳು ಬಂದಿವೆ ಎಂದು ಆಸ್ಟ್ರೇಲಿಯಾ ಜಾಹೀರಾತು ಗುಣಮಟ್ಟ ಸಂಸ್ಥೆ ಹೇಳಿದೆ. ಗಣೇಶನನ್ನು ಮಾಂಸ ತಿನ್ನುವಂತೆ ಚಿತ್ರಿಸಿರುವುದಕ್ಕೆ ವಿರೋಧಿಸಿ ಅಲ್ಲಿನ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಜಾಹೀರಾತನ್ನು ನಿಷೇಧಿಸುವಂತೆ ಆನ್ಲೈನ್ ಅಭಿಯಾನವನ್ನೂ ಕೈಗೊಂಡಿದ್ದು, ಈಗಾಗಲೇ 4,400 ಸಹಿಗಳನ್ನು ಸಂಗ್ರಹಿಸಲಾಗಿದೆ.

Get Latest updates on WhatsApp. Send ‘Add Me’ to 8550851559

Contact for any Electrical Works across Bengaluru

Loading...
error: Content is protected !!