ಸಂಪೂರ್ಣ ಚೀನಾವನ್ನು ಭಸ್ಮ ಮಾಡಬಲ್ಲದು ಭಾರತ, ಅಮೆರಿಕದ ಪರಮಾಣು ತಜ್ಞರೇ ಹೇಳಿದ್ದು – News Mirchi

ಸಂಪೂರ್ಣ ಚೀನಾವನ್ನು ಭಸ್ಮ ಮಾಡಬಲ್ಲದು ಭಾರತ, ಅಮೆರಿಕದ ಪರಮಾಣು ತಜ್ಞರೇ ಹೇಳಿದ್ದು

ವಾಷಿಂಗ್ಟನ್: ವಿನಾಕಾರಣ ಕಾಲು ಕೆರೆದುಕೊಂಡು ಭಾರತದ ಭೂಭಾಗವನ್ನು ಆಕ್ರಮಿಸಲು ಪ್ರಯತ್ನಿಸುತ್ತಿರುವ ಚೀನಾಗೆ ಬುದ್ದಿ ಕಲಿಸುವತ್ತ ಭಾರತ ಹೆಜ್ಜೆಯಿಡುತ್ತಿದೆ. ಇದರ ಭಾಗವಾಗಿಯೇ ಅಣ್ವಸ್ತ್ರಗಳನ್ನು ಆಧುನೀಕರಣಗೊಳಿಸುತ್ತಿದೆ.

ವಾಸ್ತವದಲ್ಲಿ ಇಲ್ಲಿಯವರೆಗೂ ಪಾಕಿಸ್ತಾನವನ್ನೇ ತನ್ನ ಮುಖ್ಯ ಗುರಿಯಾಗಿಸಿಕೊಂಡ ಭಾರತ, ಈಗ ಕಮ್ಯೂನಿಷ್ಟ್ ರಾಷ್ಟ್ರಕ್ಕೆ ಬುದ್ದಿ ಕಲಿಸಲು ನೋಡುತ್ತಿದೆ ಎಂದು ಅಮೆರಿಕದ ಅಣ್ವಸ್ತ್ರ ತಜ್ಞರು ಹೇಳಿದ್ದಾರೆ. ದಕ್ಷಿಣ ಭಾರತದಲ್ಲಿನ ನೆಲೆಯಿಂದ ಪ್ರಯೋಗಿಸಿದರೆ ಚೀನಾ ಭಸ್ಮವಾಗುವಂತಹ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯನ್ನು ಭಾರತ ನಿರ್ಮಿಸುತ್ತಿದೆ ಅಮೆರಿಕದ ಡಿಜಿಟಲ್ ಜರ್ನಲ್ ಪತ್ರಿಕೆಯ ಲೇಖನದಲ್ಲಿ ಹೇಳಿದ್ದಾರೆ.

150 ರಿಂದ 200 ಸಿಡಿತಲೆಗಳಿಗೆ ಸಾಕಾಗುವಷ್ಟು ಪ್ಲುಟೋನಿಯಂ ಅನ್ನು ಭಾರತ ಸಂಗ್ರಹಿಸಿದ್ದು, 120 ರಿಂದ 130 ಸಿಡಿತಲೆಗಳನ್ನು ಮಾತ್ರ ತಯಾರಿಸುತ್ತಿದೆ ಎಂದು ಲೇಖನದಲ್ಲಿ ಹೇಳಲಾಗಿದೆ. ಸಿಕ್ಕಿಂ ಗಡಿಯಲ್ಲಿ ಚೀನಾ ಭಾರತ ನಡುವೆ ಉದ್ವಿಘ್ನ ವಾತಾವರಣ ಮುಂದುವರೆದಿರುವ ಹಿನ್ನೆಲೆಯಲ್ಲಿ ಈ ಲೇಖನದಲ್ಲಿನ ವಿವರಗಳು ಮಹತ್ವ ಪಡೆದಿವೆ.

ಅಮೆರಿಕದ ಹನ್ಸ್ ಎಂ ಕ್ರಸ್ಟೆನ್ಸನ್, ರಾಬರ್ಟ್ ಎಸ್ ನೋರಿಸ್ ಎಂಬ ಇಬ್ಬರು ಅಣ್ವಸ್ತ್ರ ತಜ್ಞರು “ಇಂಡಿಯನ್ ನ್ಯೂಕ್ಲಿಯರ್ ಫೋರ್ಸ್ 2017” ಎಂಬ ಹೆಸರಿನಲ್ಲಿ ಲೇಖನ ಬರೆದಿದ್ದಾರೆ. ಇದರಲ್ಲಿ ಭಾರತದ ಅಣ್ವಸ್ತ್ರ ಸಾಮರ್ಥ್ಯವನ್ನು ಪ್ರಸ್ತಾಪಿಸಿದ್ದಾರೆ. ಭಾರತ ತನ್ನ ಅಣ್ವಸ್ತ್ರ ಸಂಪತ್ತನ್ನು ಆಧುನೀಕರಣಗೊಳಿಸುತ್ತಿದ್ದು, ಸಂಪೂರ್ಣ ಚೀನಾವನ್ನು ಗುರಿಯಾಗಿಸಿ ದಾಳಿ ಮಾಡುವಷ್ಟು ಕ್ಷಿಪಣಿಗಳನ್ನು ತಯಾರಿಸಲು ಯೋಜನೆ ರೂಪಿಸುತ್ತಿದೆ ಎಂದು ಹೇಳಲಾಗಿದೆ. ಸದ್ಯ ಭಾರತದ ಬಳಿ 7 ಪರಮಾಣು ಸಾಮರ್ಥ್ಯದ ವ್ಯವಸ್ಥೆಗಳಿದ್ದು, ಅದರಲ್ಲಿ 2 ಖಂಡಾಂತರ ಕ್ಷಿಪಣಿಗಳು. ಈಗ ಮತ್ತೆ ನಾಲ್ಕು ಪರಮಾಣು ವ್ಯವಸ್ಥೆಗಳನ್ನು ಅಭಿವೃದ್ಧಿಗೊಳಿಸುತ್ತಿದೆ. ಮುಂದಿನ ಒಂದು ದಶಕದಲ್ಲಿ ಇವುಗಳನ್ನು ಭಾರತ ತಯಾರಿಸಲಿದೆ. ಇನ್ನು ಅಗ್ನಿ-1 ಅನ್ನು ಆಧುನೀಕರಿಸಿ ಅಗ್ನಿ-2 ಅನ್ನು ತಯಾರಿಸಿದೆ ಎಂದು ಹೇಳಲಾಗಿದೆ.

ಚೀನಾ ಗೊಡ್ಡು ಬೆದರಿಕೆಗಳಿಗೆ ಜಗ್ಗದ ಭಾರತೀಯ ಸೇನೆ

2 ಸಾವಿರ ಕಿ.ಮೀ ದೂರ ಸಾಗಬಲ್ಲ ಸಾಮರ್ಥ್ಯ ಅಗ್ನಿ-2ಕ್ಕೆ ಇದೆ. ಇದರಿಂದ ಚೀನಾದ ಪಶ್ಚಿಮ, ದಕ್ಷಿಣ, ಮಧ್ಯ ಭೂಪ್ರದೇಶಗಳಣ್ನು ಗುರಿಯಾಗಿ ದಾಳಿ ಮಾಡಬಹುದು. ಇನ್ನು ಅಗ್ನಿ-4 ಅನ್ನು ಭಾರತದ ಈಶಾನ್ಯ ರಾಜ್ಯಗಳಿಂದ ಪ್ರಯೋಗಿಸಿದರೆ ಸಂಪೂರ್ಣ ಚೀನಾವನ್ನು ಟಾರ್ಗೆಟ್ ಮಾಡಬಹುದು. ಲಾಂಗ್ ರೇಜ್ ಅಗ್ನಿ-5 ಅನ್ನು ಕೂಡಾ ಭಾರತ ಅಭಿವೃದ್ಧಿಗೊಳಿಸುತ್ತಿದೆ. 5 ಸಾವಿರ ಕಿ.ಮೀ ಗೂ ಹೆಚ್ಚು ದೂರ ಸಾಗಬಲ್ಲ ಸಾಮರ್ಥ್ಯವಿರುವ ಈ ಖಂಡಾಂತರ ಕ್ಷಿಪಣಿಯನ್ನು ದಕ್ಷಿಣ ಭಾರತದಿಂದ ಪ್ರಯೋಗಿಸಿದರೂ ಸಂಪೂರ್ಣ ಚೀನಾವನ್ನು ಗುರಿಯಾಗಿಸಿಕೊಳ್ಳಬಹುದು ಎಂದು ಕ್ರಸ್ಟೆನ್ಸನ್, ನೋರಿಸ್ ಹೇಳಿದ್ದಾರೆ.

ನೇಪಾಳಕ್ಕೆ ಚೀನಾ ಇಂಟರ್ನೆಟ್, ಭಾರತದ ಏಕಸ್ವಾಮ್ಯತೆಗೆ ಧಕ್ಕೆ

Loading...