8 ಪಾಕ್ ಯೋಧರನ್ನು ನೆಲಕ್ಕುರುಳಿಸಿದ ಭಾರತೀಯ ಯೋಧರು

ನವದೆಹಲಿ: ಒಬ್ಬ ಭಾರತೀಯ ಯೋಧನ ತಲೆ ಕಡಿದು, ಮತ್ತಿಬ್ಬರು ಯೋಧರನ್ನು ಪಾಕ್ ಸೈನಿಕರು ಹತ್ಯೆ ಮಾಡಿದ ನಂತರ, ಭಾರತೀಯ ಯೋಧರು ನಿಯಂತ್ರಣ ರೇಖೆಯುದ್ದಕ್ಕೂ ಇರುವ ಪಾಕ್ ಪೋಸ್ಟ್ ಗಳ ಮೇಲೆ ಪ್ರಬಲ ದಾಳಿ ನಡೆಸಿದ್ದಾರೆ. ಈ ದಾಳಿಗಳಲ್ಲಿ ಸುಮಾರು 8 ಪಾಕ್ ಯೋಧರನ್ನು ನೆಲಕ್ಕುರುಳಿಸಿದ್ದಾರೆ ಎನ್ನಲಾಗಿದೆ.

ಭಾರತೀಯ ಯೋಧರ ಏಕಾ ಏಕಿ ನಡೆಸಿದ ದಾಳಿಯಿಂದ ಶಾಕ್ ಗೆ ಗುರಿಯಾದ ಪಾಕ್ ಸೇನೆ, ಉಭಯ ದೇಶಗಳ ಕಮಾಂಡರ್ ಗಳು ಮಾತುಕತೆ ನಡೆಸಬೇಕೆಂದು ಮನವಿ ಮಾಡಿದೆ. ಬುಧವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ನಡುವೆ ನಿಯಂತ್ರಣ ರೇಖೆಯುದ್ದಕ್ಕೂ ಇರುವ ಪಾಕ್ ಮಿಲಿಟರಿ ಪೋಸ್ಟ್ ಗಳ ಮೆಲೆ ಭಾರತೀಯ ಸೇನೆ ದಾಳಿ ನಡೆಸಿತ್ತು.

ಹೀಗಾಗಿ ಆತಂಕಗೊಂಡ ಪಾಕ್ ಸೆನೆ, ಮಾತುಕತೆಗೆ ಆಹ್ವಾನಿಸಿದೆ. ಆದರೆ ಮಾತುಕತೆ ಎಲ್ಲಿ, ಯಾವಾಗ ಎಂಬ ವಿಷಯವನ್ನು ಮಾತ್ರ ತಿಳಿಸಿಲ್ಲ. ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರೊಂದಿಗೆ ಪಾಕ್ ನ ಮಾಜ್ ಜನರಲ್ ಸಹೀರ್ ಶಂಷಾದ್ ಮಿರ್ಜಾ ಮಾತನಾಡಿದ್ದಾರೆ ಎಂದು ಭಾರತೀಯ ಸೇನೆ ಹೇಳಿದೆ. ಭಾರತ ನಡೆಸಿದ ದಾಳಿಗೆ ಪಾಕಿಸ್ತಾನ ನಾಗರಿಕರು ಪ್ರಯಾಣಿಸುತ್ತಿದ್ದ ಒಂದು ಬಸ್ಸಿಗೆ ಬೆಂಕಿ ಬಿದ್ದಿದೆ ಎಂದು ಮಿರ್ಜಾ ಹೇಳಿದ್ದಾರೆ ಎಂದು ಸೇನೆ ಹೇಳಿದೆ.

ಮಿರ್ಜಾ ಮಾತಿಗೆ ಪ್ರತಿಕ್ರಿಯಿಸಿರುವ ಸಿಂಗ್, ಭಾರತದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಪಾಕಿಸ್ತಾನ ಪೊಸ್ಟ್ ಗಳ ಮೇಲೆ ಮಾತ್ರವೆ ನಾವು ದಾಳಿ ನಡೆಸಿದ್ದೇವೆ ಎಂದು ಮಿರ್ಜಾಗೆ ಹೇಳಿದ್ದಾರೆ.