Warning: preg_match(): Compilation failed: range out of order in character class at offset 33 in /home1/newsmg7m/public_html/wp-content/plugins/json-api/singletons/api.php on line 294
ಪಾಕ್ ಗೆ ಹಿನ್ನಡೆ, ಜಲವಿದ್ಯುತ್ ಕೇಂದ್ರಗಳ ನಿರ್ಮಾಣಕ್ಕೆ ಭಾರತಕ್ಕೆ ಹಕ್ಕಿದೆ ಎಂದ ವಿಶ್ವಬ್ಯಾಂಕ್ – News Mirchi

ಪಾಕ್ ಗೆ ಹಿನ್ನಡೆ, ಜಲವಿದ್ಯುತ್ ಕೇಂದ್ರಗಳ ನಿರ್ಮಾಣಕ್ಕೆ ಭಾರತಕ್ಕೆ ಹಕ್ಕಿದೆ ಎಂದ ವಿಶ್ವಬ್ಯಾಂಕ್

ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ವಿಷಯದಲ್ಲಿ ವಿಶ್ವಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ. ಸಿಂಧೂ ಜಲ ಒಪ್ಪಂದದ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸಿರುವ ವಿಶ್ವ ಬ್ಯಾಂಕ್, 1960 ರ ಸಿಂಧೂ ಒಪ್ಪಂದದಂತೆ ಕೆಲವ ನಿರ್ಬಂಧಗಳೊಂದಿಗೆ ಭಾರತ ಜೀಲಂ ಮತ್ತು ಚಿನಾಬ್ ಉಪನದಿಗಳ ಮೇಲೆ ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ಲಾಂಟ್ಸ್ ನಿರ್ಮಿಸುವ ಹಕ್ಕು ಭಾರತಕ್ಕಿದೆ ಎಂದು ಹೇಳಿದೆ. ಈ ವಿಷಯದಲ್ಲಿ ವಿಶ್ವ ಬ್ಯಾಂಕ್ ಪಾಕಿಸ್ತಾನದ ವಾದವನ್ನು ತಿರಸ್ಕರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತು ಭಾರತದ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯ ನಂತರ ವಿಶ್ವ ಬ್ಯಾಂಕ್ ತನ್ನ ತೀರ್ಮಾನವನ್ನು ಹೇಳಿದೆ.

ವಿಶ್ವ ಬ್ಯಾಂಕ್ ತೀರ್ಪಿನಿಂದಾಗಿ ಜೀಲಂ, ಚಿನಾಬ್ ನದಿಗಳ ಮೇಲೆ ಕಿಷನ್ ಗಂಗಾ(330 ಮೆಗಾ ವ್ಯಾಟ್), ರಾಟ್ಲೆ(850) ಮೆಗಾ ವ್ಯಾಟ್ ಜಲವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಭಾರತಕ್ಕೆ ದಾರಿ ಸುಗಮವಾಗಿದೆ. ವಿಶ್ವ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿಯೇ 1960 ರಲ್ಲಿ ಭಾರತ, ಪಾಕಿಸ್ತಾನಗಳ ನಡುವೆ ಸಿಂಧೂ ನೀರಿನ ಒಪ್ಪಂದವಾಗಿತ್ತು.

ನಿತೀಶ್ ವಿರುದ್ಧ ಮುನಿಸು, ಹೊಸ ಪಕ್ಷ ಕಟ್ಟುವತ್ತ ಶರದ್ ಯಾದವ್

ಸಿಂಧೂ ನದಿ ನೀರಿನ ಒಪ್ಪಂದದ ಪ್ರಕಾರ ಪಶ್ಚಿಮ ನದಿಗಳಾದ ಸಿಂಧೂ, ಜೀಲಂ, ಚಿನಾಬ್ ನದಿಗಳ ನೀರನ್ನು ಪಾಕಿಸ್ತಾನ ಬಳಸಿಕೊಳ್ಳಬಹುದು. ಆದರೆ ಒಪ್ಪಂದದಲ್ಲಿನ ಕೆಲ ನಿಯಂತ್ರಣಗಳಿಗೆ ಒಳಪಟ್ಟು ಈ ಎರಡೂ ನದಿಗಳ ಮೇಲೆ ಜಲವಿದ್ಯುತ್ ಕೇಂದ್ರಗಳನ್ನು ನಿರ್ಮಿಸುವ ಅವಕಾಶ ಭಾರತಕ್ಕಿದೆ ಎಂದು ವಿಶ್ವ ಬ್ಯಾಂಕ್ ಸ್ಪಷ್ಟಪಡಿಸಿದೆ.

ಜಿಡ್ಡು ಚರ್ಮಕ್ಕೆ 5 ಸಿಂಪಲ್ ಮನೆ ಮದ್ದು, ಪ್ರಯತ್ನಿಸಿ ನೋಡಿ

ಈ ಎರಡೂ ಯೋಜನೆಗಳ ಡಿಸೈನ್ ಗಳ ಕುರಿತು ತಮಗಿರುವ ಆತಂಕವನ್ನು ಬಗೆಹರಿಸಿಕೊಳ್ಳಲು ಆರ್ಬಿಟ್ರೇಷನ್ ರಚನೆ ಮಾಡಬೇಕು ಎಂದು ಪಾಕಿಸ್ತಾನ ವಿಶ್ವ ಬ್ಯಾಂಕ್ ಮೊರೆ ಹೋಗಿತ್ತು. ಇದಕ್ಕಾಗೊ ಒಬ್ಬ ತಟಸ್ಥ ತಜ್ಞರನ್ನು ನೇಮಕ ಮಾಡಬೇಕೆಂದು ಭಾರತವೂ ಮನವಿ ಮಾಡಿತ್ತು. ಈ ಕುರಿತು ಚರ್ಚೆಗಳು ಮುಂದುವರೆಯುತ್ತವೆ, ಸೆಪ್ಟೆಂಬರ್ ನಲ್ಲಿ ಮತ್ತೊಮ್ಮೆ ಸಭೆ ಸೇರಲು ಉಭಯ ದೇಶಗಳು ಅಂಗೀಕರಿಸಿವೆ ಎಂದು ವಿಶ್ವಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

Contact for any Electrical Works across Bengaluru

Loading...
error: Content is protected !!