ಭಾರತ – ಪಾಕ್ ನಡುವೆ ರಷ್ಯಾ ಮಧ್ಯಸ್ಥಿಕೆ? – News Mirchi

ಭಾರತ – ಪಾಕ್ ನಡುವೆ ರಷ್ಯಾ ಮಧ್ಯಸ್ಥಿಕೆ?

ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾಶ್ಮೀರ ವಿವಾದ ಸೇರಿದಂತೆ ದ್ವಿಪಕ್ಷೀಯ ಸಮಸ್ಯೆಗಳ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ರಷ್ಯಾ ಅಧ್ಯಕ್ಷ ಪುತಿನ್ ಹೇಳಿದ್ದಾಗಿ ಪಾಕ್ ಹೇಳಿಕೆ ನೀಡಿತ್ತು. ಕಳೆದ ವಾರ ಶಾಂಘೈನಲ್ಲಿ ನಡೆದ ಅಧಿವೇಶನದಲ್ಲಿ ಪಾಕಿಸ್ಥಾನ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ನಡೆದ ಭೇಟಿಯಲ್ಲಿ ಪುತಿನ್ ಈ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಪಾಕಿಸ್ತಾನ ಹೇಳಿಕೊಂಡಿತ್ತು.

ಆದರೆ ಪುತಿನ್ ಭಾರತ ಮತ್ತು ಪಾಕಿಸ್ತಾನದ ನಡುವೆ ರಷ್ಯಾ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ಹೇಳಿಕೆ ಸಂಪೂರ್ಣ ಸುಳ್ಳು ಮತ್ತು ಅರ್ಥವಿಲ್ಲದ್ದು ಎಂದು ರಷ್ಯಾ ಸ್ಪಷ್ಟಪಡಿಸಿದೆ. ಆಸ್ಥಾನಾದಲ್ಲಿ ನಿಜ ಹೇಳಬೇಕೆಂದರೆ ಷರೀಫ್-ಪುತಿನ್ ನಡುವೆ ಭಾರತ – ಪಾಕ್ ವಿಷಯವೇ ಪ್ರಸ್ತಾಪವಾಗಿಲ್ಲ ಎಂದು ಭಾರತದಲ್ಲಿನ ರಷ್ಯಾ ರಾಯಭಾರಿ ಸ್ಪಷ್ಟಪಡಿಸಿದ್ದಾರೆ. ದ್ವಿಪಕ್ಷೀಯ ಚರ್ಚೆಗಳ ಮೂಲಕವೇ ಉಭಯ ದೇಶಗಳ ಸಮಸ್ಯೆಗಳು ಬಗೆಹರಿಯಬೇಕು ಎಂದು ರಷ್ಯಾ ಬಯಸುತ್ತದೆ ಎಂದು ಅವರು ಹೇಳಿದ್ದಾರೆ. ಪಾಕ್ ಹೇಳಿಕೆಗಳನ್ನು ಭಾರತದ ವಿದೇಶಾಂಗ ಸಚಿವಾಲಯ ಖಂಡಿಸಿದೆ. ಮಧ್ಯಸ್ಥಿಕೆ ಕುರಿತು ರಷ್ಯಾದಿಂದ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

Contact for any Electrical Works across Bengaluru

Loading...
error: Content is protected !!