ಚೀನಾಕ್ಕೆ ಕಡಿವಾಣ ಹಾಕಲು ನೆರೆಯ ದೇಶಗಳನ್ನು ಸೇರಿಸಿಕೊಳ್ಳಬೇಕು |News Mirchi

ಚೀನಾಕ್ಕೆ ಕಡಿವಾಣ ಹಾಕಲು ನೆರೆಯ ದೇಶಗಳನ್ನು ಸೇರಿಸಿಕೊಳ್ಳಬೇಕು

ಪಾಕಿಸ್ತಾನದೊಂದಿಗಿನ ಪಶ್ಚಿಮ ಗಡಿಯಿಂದ ಭಾರತವು ತನ್ನ ಮಿಲಿಟರಿ ಗಮನವನ್ನು ಚೀನಾ ಕಡೆಯ ಉತ್ತರ ಗಡಿಗೆ ಹರಿಸಬೇಕು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ಪ್ರದೇಶದಲ್ಲಿ ಬೆಳೆಯತ್ತಿರುವ ಚೀನಾಗೆ ಕಡಿವಾಣ ಹಾಕಲು ನೆರೆಯ ದೇಶಗಳೊಂದಿಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ಚಳಿಗಾಲದ ಕಾರಣದಿಂದ ಈಗ ಚೀನಾ ಪಡೆಗಳು ಇಲ್ಲಿ ಕಡಿಮೆಯಾಗಿರಬಹುದು. ಚಳಿಗಾಲ ಮುಗಿದ ನಂತರ ಅವರು ಮತ್ತೆ ಇಲ್ಲಿಗೆ ಮರಳಬಹದು, ಅಥವಾ ಬೇರೆಡೆ ತೆರಳಬಹುದು. ಆದರೆ ಒಂದು ವೇಳೆ ಇಲ್ಲಿಗೆ ಪುನಃ ಬಂದರೆ ಏನು ಮಾಡಬೇಕು ಎಂಬುದನ್ನು ನಾವು ನೋಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ರಾವತ್ ಉತ್ತರಿಸಿದರು.

ಚೀನಾ ಪ್ರಬಲ, ಆದರೆ ಭಾರತ ದುರ್ಬಲವಲ್ಲ

ನೆರೆಯ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಮಯನ್ಮಾರ್, ಭೂತಾನ್ ಮತ್ತು ಅಫ್ಘನಿಸ್ತಾನಗಳನ್ನು ಭಾರತವು ಎಂದೂ ತನ್ನಿಂದ ದೂರ ಸರಿಯದಂತೆ ನೋಡಿಕೊಳ್ಳಬೇಕು. ಚೀನಾ ಪ್ರಬಲ ದೇಶವಾಗಿದೆ ಹೌದು, ಆದರೆ ಭಾರತವೂ ದುರ್ಬಲವಲ್ಲ ಎಂದು ರಾವತ್ ಒತ್ತಿ ಹೇಳಿದರು.

ಜನವರಿ 15 ರಂದು ನಡೆಯುವ ಸೇನಾ ದಿನಾಚರಣೆಗೆ ಮುಂಚಿತವಾಗಿ ಸಾಂಪ್ರದಾಯಿಕವಾಗಿ ಮಾಧ್ಯಮಗಳೊಂದಿಗೆ ಸೇನಾ ಮುಖ್ಯಸ್ಥರು ಸಮಾಲೋಚನೆ ನಡೆಸಿದರು. ಉತ್ತರ ಡೊಕ್ಲಾಮ್ ನ ಭೂತಾನ್ ಮತ್ತು ಭಾರತ ಟ್ರೈಜಂಕ್ಷನ್ ಬಳಿ ಇನ್ನೂ ಕೆಲವು ಚೀನಾ ಪಡೆಗಳಿವೆ ಎಂದು ಅವರು ಹೇಳಿದರು.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!