ಸೈಬರ್ ಭದ್ರತೆಯಲ್ಲಿ ಭಾರತಕ್ಕೆ 23ನೇ ಸ್ಥಾನ – News Mirchi

ಸೈಬರ್ ಭದ್ರತೆಯಲ್ಲಿ ಭಾರತಕ್ಕೆ 23ನೇ ಸ್ಥಾನ

ವಿಶ್ವಾದ್ಯಂತ ಸೈಬರ್ ಸುರಕ್ಷತೆಯಲ್ಲಿ ಒಟ್ಟು 165 ದೇಶಗಳಲ್ಲಿ ಭಾರತ 23 ನೇ ಸ್ಥಾನದಲ್ಲಿ ನಿಂತಿದೆ ಎಂದು ಇಂಟರ್ನ್ಯಾಷನಲ್ ಟೆಲಿಕಮ್ಯೂನಿಕೇಷನ್ ಯೂನಿಯನ್(ಐಟಿಯು) ಹೇಳಿದೆ. ವಿಶ್ವ ಸೈಬರ್ ಭದ್ರತಾ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿ ಸಿಂಗಾಪುರವಿದೆ. ಅಮೆರಿಕಾ, ಮಲೇಷಿಯಾ, ಒಮನ್, ಇಸ್ಓನಿಯಾ, ಮಾರಿಷಸ್, ಆಸ್ಟ್ರೇಲಿಯಾ ನಂತರದ ಸ್ಥಾನಗಳಲ್ಲಿವೆ .

ಈ ಪಟ್ಟಿಯಲ್ಲಿ 77 ದೇಶಗಳು ಸೈಬರ್ ಭದ್ರತೆಗಾಗಿ ಈಗಾಗಲೇ ಕ್ರಮಗಳನ್ನು ಕೈಗೊಂಡಿರುವುದಾಗಿ ಐಟಿಯೂ ಹೇಳಿದೆ. ಕಳೆದ ವರ್ಷ ಕಳುಹಿಸಿದ ಇಮೇಲ್ ಗಳಲ್ಲಿ ಶೇ.1 ರಷ್ಟು ಸೈಬರ್ ದಾಳಿಗಳ ಉದ್ದೇಶದಿಂದ ಕೂಡಿವೆ ಎಂದು ಐಟಿಯು ಸೆಕ್ರೆಟರಿ ಜನರಲ್ ಹೌಲಿನ್ ಜಹೋ ಹೇಳಿದ್ದಾರೆ.

Loading...